ಬಿಜೆಪಿಗರ ಅಸಹ್ಯ ಭಾಷೆ ಬಳಕೆ: ಬಿಜೆಪಿಗರ ವಿರುದ್ಧ ಪ್ರಕಾಶ್ ರೈ ಟ್ವೀಟ್ ವಾರ್

ಪ್ರಿಯ ಸರ್ವೋಚ್ಛ ನಾಯಕ ಅಸಹ್ಯಕರ ಭಾಷೆಯನ್ನು ಇತರ ಪಕ್ಷಗಳ ವಿರುದ್ಧ ಬಳಸುವ ಮುನ್ನ ನೀವು ಮತ್ತು ನಿಮ್ಮ ಪಕ್ಷ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸುತ್ತೀರಾ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ಕಾಂಗ್ರೆಸ್, ಯುಪಿಎ ಸರ್ಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ಇತರರ ಕುರಿತು ನೀಡಿರುವ ಹೇಳಿಕೆಗಳನ್ನು ಒಳಗೊಂಡ 2.20 ಸೆಕೆಂಡ್ ಇರುವ ವಿಡಿಯೋವನ್ನು ಪ್ರಕಾಶ್ ರೈ ಟ್ವೀಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 24 ಸಾವಿರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 1.9 ರೀಟ್ವೀಟ್ ಆಗಿದ್ದು, 4.2 ಸಾವಿರ ಲೈಕ್​ಗಳು ಈ ಪೋಸ್ಟ್​ಗೆ ಲಭ್ಯವಾಗಿವೆ. #JustAsking ಹ್ಯಾಷ್​ಟ್ಯಾಗ್​​ನಡಿ ಟ್ವೀಟ್​ವಾರ್ ಮುಂದುವರೆಸಿದ್ದಾರೆ.

0

Leave a Reply

Your email address will not be published. Required fields are marked *