ಅನುಚಿತ ವರ್ತನೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಮನೆ ಮುಂದೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಯುವಕರ ಗುಂಪನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ತಡ ರಾತ್ರಿ ಹುಬ್ಬಳ್ಳಿಯಲ್ಲಿ ‌ನಡೆದಿದೆ. ನಗರದ 60 ನೇ ವಾರ್ಡ್​​ನ ಮಸ್ತರ್ ಸೂಪಾದ ನಿವಾಸಿ ಮುಸ್ತಾಕ್ ಮಹಮ್ಮದ್ ಬಿಜಾಪುರ ಹಲ್ಲೆಗೊಳಗಾದ ವ್ಯಕ್ತಿ. ಸ್ಥಳಿಯ ಯುವಕರಾದ ಸಾಧಿಕ್ ಗಿರಣಿ, ಮುಷ್ತಾಕ್ ಗಿರಣಿ, ಯೂಸುಫ್ ಎಂಬುವವರು ಹಲ್ಲೆ ಮಾಡಿದ್ದಾರೆ. ಈ ಹಿಂದೆ ಸಾಧಿಕ್ ಮುಷ್ತಾಕ್​ರ ಮಗಳು ಮುಸ್ಕಾನ್(16)ಳ ಜೊತೆ ಸಾಧಿಕ್​ ಓಡಿ ಹೋಗಿದ್ದ. ಈ ಕುರಿತಂತೆ ಹುಡುಗಿಗೆ 18 ತುಂಬಿರದ ಕಾರಣ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಎರಡು ಮನೆಯವರನ್ನು ಕರೆಯಿಸಿ ರಾಜಿ ಸಂಧಾನ ಮಾಡಿದ್ದರು. ಆದರೆ ಸಾಧಿಕ್ ಇಲ್ಲ ಸಲ್ಲದ ನೆಪ ಮಾಡಿಕೊಂಡು ಮುಷ್ತಾಕ್ ಮನೆಯ ಮುಂದೆ ಓಡಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಮುಷ್ತಾಕ್ ಮೇಲೆ ಸಾಧಿಕ್ ಮತ್ತು ಆತನ ಸ್ನೇಹಿತರು ತಲ್ವಾರ್, ಕಬ್ಬಿಣದ ರಾಡ್​ಗಳಿಂದ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮುಷ್ತಾಕ್ ದೂರಿದ್ದಾನೆ.

0

Leave a Reply

Your email address will not be published. Required fields are marked *