ಇಬ್ರಾಹಿಂ ದಾವೂದ್​ ಆಸ್ತಿ ವಶ..!

ಇಂಗ್ಲೆಂಡ್​ನಲ್ಲಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಆಸ್ತಿಯನ್ನ ವಶ ಪಡಿಸಿಕೊಳ್ಳಲಾಗಿದೆ. 2015 ರಲ್ಲಿ ಇಂಗ್ಲೆಂಡ್​ಗೆ ದಾವೂದ್​ ಆಸ್ತಿಯ ಕಡತವನ್ನು ಭಾರತ ಸರ್ಕಾರ ರವಾನಿಸಿತ್ತು. ಭೂಗತ ಪಾತಕಿಯ ಆಸ್ತಿ ಬಗ್ಗೆ ಎನ್​ಡಿಎ ಸರ್ಕಾರ ಮಾಹಿತಿ ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲೀಗ ಇಂಗ್ಲೆಂಡ್ ಸರ್ಕಾರ, ದಾವೂದ್ ಇಬ್ರಾಹಿಂ ಆಸ್ತಿಯನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈ ಮೂಲಕ ಭೂಗತ ಪಾತಕಿಗೆ ಭಾರೀ ಹಿನ್ನಡೆಯಾಗಿದೆ.

0

Leave a Reply

Your email address will not be published. Required fields are marked *