ಯೂಟುಬ್​​ನಲ್ಲಿ ಸದ್ಯ ವಾರ್ನರ್​​ ಮಗಳ ಜಲ್ವಾ…

ಕ್ರಿಕೆಟ್​ ಆಟಗಾರರು ಫುಲ್​ ಬ್ಯೂಸಿ ಆಗಿರ್ತಾರೆ. ದೇಶ ಪ್ರವಾಸದ ವೇಳೆ ತಮ್ಮ ಕುಟುಂಬವನ್ನು ಜೊತೆಗೆ ಕರೆದುಕೊಂಡು ಹೋಗ್ತಾರೆ. ಇನ್ನು ಕೆಲವು ಆಟಗಾರರು ಇದೇ ವೇಳೆ ಮಕ್ಕಳೊಂದಿಗೆ ಮಸ್ತ ಮಜಾ ಮಾಡ್ತಾರೆ. ಇಂತಹ ಪ್ರಸಂಗಗಳು ಕ್ರಿಕೆಟ್​​ನಲ್ಲಿ ಹೊಸದೇನು ಅಲ್ಲವೇ ಅಲ್ಲ. ಆದ್ರೆ ಈಗ ಸನ್​ರೈಸರ್ಸ್​​ ಹೈದ್ರಾಬಾದ್​ ತಂಡದ ಥೀಮ್​ ಸಾಂಗ್​​ಗೆ ಸ್ಟಾರ್​ ಪ್ಲೇಯರ್​ ಮಗಳೊರ್ವಳು ಹೆಜ್ಜೆ ಹಾಕಿದ್ದಾಳೆ ಕ್ರಿಕೆಟ್​ ಆಟ ಎಂದ್ರೆ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ. ಈ ಕ್ರೀಡಾ ಪಟುಗಳಿಗೆ ವಿಶ್ವವ್ಯಾಪಿ ಬೆಂಬಲಿಗರು ಇದ್ದಾರೆ. ಇಂತಹ ಕ್ರೀಡಾ ಸಾಧಕರು ತಮ್ಮ ಕುಟುಂಬದೊಂದಿಗೆ ವಿಶ್ವ ಪರ್ಯಟನೆ ಮಾಡ್ತಾ ಇದ್ದಾರೆ. ಇನ್ನು ಕಳೆದ ಐಪಿಎಲ್​​ನಲ್ಲಿ ಎಬಿಡಿ ವಿಲಿಯರ್ಸ್​​ ತಮ್ಮ ಮಗನೊಂದಿಗೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ ಆಡಿ ಎಲ್ಲರ ಗಮನ ಸೆಳೆದ್ರು. 

ದಕ್ಷಿಣ ಆಫ್ರಿಕಾದ ಸ್ಫೊಟಕ ಬ್ಯಾಟ್ಸ್​​ಮನ್​ ಡೇವಿಡ್​ ವಾರ್ನರ್​​ ಮೈದಾನದಲ್ಲಿ ರನ್​ ಚಿತ್ತಾರವನ್ನು ಬಿಡಿಸಬಲ್ಲ ಆಟಗಾರ. ಎದುರಾಳಿಗಳನ್ನ ಬೆನ್ನಟ್ಟಿ ಬೇಟೆ ನಡೆಸಬಲ್ಲ ಪ್ಲೇಯರ್. ಬೌಂಡರಿ ಹಾಗೂ ಸಿಕ್ಸರ್​​ಗಳ ಮೂಲಕ ರನ್​ ರೇಟ್​​ ಹೆಚ್ಚಿಸಬಲ್ಲ ಪ್ಲೇಯರ್​.. ಇನ್ನು ಐಪಿಎಲ್​​ ವೇಳೆ ಡೇವಿಡ್​ ವಾರ್ನರ್​​ ಸಹ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತಮ್ಮ ಮುದ್ದಿನ ಮಗಳೊಂದಿಗೆ ಫುಟ್ ಪಾತ್​ ಮೇಲೆ ವಾಕ್​ ಮಾಡಿ ಎಲ್ಲರ ಗಮನ ಸೆಳೆದ್ರು. ಡೇವಿಡ್​ ವಾರ್ನರ್​​ ತಮ್ಮ ಮಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮಗಳೊಂದಿಗೆ ಮಸ್ತ್​ ಮಜಾ ಮಾಡ್ತಾರೆ. ಇನ್ನು ಮಕ್ಕಳೊಂದಿಗೆ ಮಕ್ಕಳಾಗುವ ಸ್ಟಾರ್​ ಆಟಗಾರರು, ಸಖತ್​ ಎಂಜಾಯ್​ ಮಾಡ್ತಾರೆ.ಇನ್ನು ಡೇವಿಡ್​ ವಾರ್ನರ್​ ಕ್ಯೂಟ್ ಮಗಳು ಡ್ಯಾನ್ಸ್​ ಮಾಡುವ ದೃಶ್ಯ ಸಖತ್​ ವೈರಲ್​ ಆಗಿತ್ತು… ಈಗ ಡೇವಿಡ್​​ ವಾರ್ನರ್​ ಮಗಳು ಸನರೈಸರ್ಸ್​​ ಹೈದರಾಬಾದ್​ ಥೀಮ್ ಸಾಂಗ್​​ಗೆ ಮಸ್ತ್ ಸ್ಟೆಪ್​ ಹಾಕಿ ಎಲ್ಲರ ಗಮನ ಸೆಳೆದಿದ್ದಾಳೆ. ಇಂಡಿಯನ್​ ಪ್ರೀಮಿಯರ್ ಲೀಗ್​​ ಆರಂಭವಾಗೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಟೂರ್ನಿ ಆರಂಭವಾದ ಮೇಲೆ ಚಿಣ್ಣರು ಎಷ್ಟು ಸೌಂಡ್​ ಮಾಡ್ತಾರೆ ಎಂಬುದನ್ನು ಕಾದು ನೋಡಬೇಕು.
ವಿನಾಯಕ ಲಿಮಯೆ, ಸ್ಪೋರ್ಟ್ಸ್​ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *