ಸಾವಿನಲ್ಲೂ ಮಾನವೀಯತೆ..

ಐಸ್ ಕ್ರೀಮ್ ಮಾರುತ್ತಿದ್ದ ವ್ಯಕ್ತಿಯೊಬ್ಬನ ಸಾವಿನಲ್ಲಿ ಜಾತಿ ಮತ ಮೀರಿ ಮಾನವೀಯತೆ ಮೆರೆದ ಪ್ರಸಂಗ ದಾವಣಗೆರೆಯಲ್ಲಿ ನಡೆದಿದೆ‌. ಐಸ್ ಕ್ರೀಮ್ ಮಾರಾಟ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ರಾಮ್ ಶಕ್ತಿ ಎಂಬ ವ್ಯಕ್ತಿ ಮೃತಪಟ್ಟ ಹಿನ್ನಲೆ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಮುಸ್ಲಿಂ ಬಾಂಧವರು ಕೈ ಜೋಡಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಹಣ ಹೊಂದಿಸಿ ಶವವನ್ನು ಉತ್ತರ ಪ್ರದೇಶಕ್ಕೆ ರವಾನಿಸುವುದರ ಮೂಲಕ ಮಾನವಿಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ ಹರ್​​​ದೋಯಿ ಜಿಲ್ಲೆ ರಸೂಲ್ ಬ್ರಹ್ಮಗ್ರಾಮದ ಶಕ್ತಿರಾಮ್ ಕಳೆದ ಹಲವು ವರ್ಷಗಳಿಂದ ಭಾಷಾ ನಗರದ ದ್ವಾರ ಬಾಗಿಲ ಬಳಿ ಐಸ್ ಕ್ರೀಂ ಗಾಡಿ ಇಟ್ಡುಕೊಂಡು ಜೀವನ ನಡೆಸುತ್ತಿದ್ದ. ಆದರೆ ರಾತ್ರಿ ಆಕಸ್ಮಿಕವಾಗಿ ಶಕ್ತಿರಾಮ್ ಮೃತಪಟ್ಟಿದ್ದ. ಇದರಿಂದ ಸಂಬಂಧಿಕರನ್ನು ಸಂಪರ್ಕಿಸಿ ಸ್ಥಳೀಯರು ಮಾನವಿಯತೆ ಮೆರೆದಿದ್ದಾರೆ. 72 ಸಾವಿರ ರೂ. ಹಣವನ್ನು ಹೊಂದಿಸಿ, ಆಂಬುಲೆನ್ಸ್ ವೆಚ್ಚ ಭರಿಸಲು ಸ್ಥಳೀಯರು ನೆರವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆ, ಭಾವೈಕ್ಯತೆ ಮರೆಯಾಗುತ್ತಿದ್ದು, ಈ ಘಟನೆ ಮಾದರಿಯಾಗಿದೆ…..

0

Leave a Reply

Your email address will not be published. Required fields are marked *