ರಿಲ್ಯಾಕ್ಸ್ ಮೂಡ್ ನಲ್ಲಿ ಆನೆಗಳು

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ನಿನ್ನೆ ತೆರೆ ಬಿದ್ದಿದೆ. ವಿಜೃಂಭಣಯ ಜಂಬೂ ಸವಾರಿ ಕೂಡ ಯಶಸ್ವಿಯಾಗಿ ನಡೆದಿದೆ. ಹೀಗಾಗಿ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿದ್ದ 15 ಆನೆಗಳು ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿವೆ. ನಾಳೆ ನಾಡಿನಿಂದ ಕಾಡಿಗೆ ತೆರಳಲು ಗಜಪಡೆಗಳು ಸಿದ್ಧವಾಗಿವೆ. ಇನ್ನು ಬಿದ್ದು ಗಾಯಗೊಂಡಿದ್ದ ಮಾವುತ ಚೆನ್ನಪ್ಪ ಆರೋಗ್ಯದಲ್ಲಿ ಚೇತರಿಸಿಕೊoಡಿದ್ದಾರೆ.

ವಿಶ್ವವಿಖ್ಯಾತ ಜಂಬೂ ಸವಾರಿಗೆ ತೆರೆಬಿದ್ದಿದೆ. ಅತ್ಯಂತ ಯಶಸ್ವಿಯಾಗಿ ಅರಮನೆಯಿಂದ ಬನ್ನಿ ಮಂಟಪಕ್ಕೆ ನಿನ್ನೆ ಅಂಬಾರಿ ಸಾಗಿದೆ. ಲಕ್ಷಾಂತರ ಜನ್ರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಹೀಗಾಗಿ ಸದ್ಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿದ್ದ 15 ಆನೆಗಳು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿವೆ. ಬೆಳಿಗ್ಗೆಯಿಂದಲೇ ಎಲ್ಲಾ ಆನೆಗಳಿಗೂ ಸ್ನಾನ ಮಾಡಿಸಿ, ವಾಕಿಂಗ್ ಗೆ ಕರೆದೊಯ್ಯಲಾಯ್ತು. ಜೊತೆಗೆ ಬೆಳಿಗ್ಗೆಯಿಂದಲೇ ಎಲ್ಲಾ ಆನೆಗಳಿಗೂ ವಿಶೇಷ ಆಹಾರವನ್ನು ನೀಡಲಾಯ್ತು. ಹಾಗೆ ವೈಧ್ಯಾಧಿಕಾರಿಗಳು ಭೇಟಿ ನೀಡಿ ಆನೆಗಳ ಆರೋಗ್ಯವನ್ನು ಪರಿಶೀಲಿಸಿದ್ರು.

ಇನ್ನು ಇಪ್ಪತ್ತು ದಿನಗಳಿಂದ ಮೈಸೂರಿನಲ್ಲಿದ್ದ ಆನೆಗಳು ನಾಳೆ ನಾಡಿನಿಂದ ಪುನಃ ಕಾಡಿಗೆ ತೆರಳಲಿವೆ. ಆನೆ ಶಿಬಿರದಲ್ಲಿ ಮಾವುತರು ಮತ್ತು ಕಾವಡಿಗರ ಆರೈಕೆಯಲ್ಲಿರಲಿವೆ. ಜೊತೆಜೊತೆಗೆ ಆನೆಗಳ ದಿನಚರಿಯೂ ಬದಲಾಗಲಿದೆ. ಇನ್ನು ಜಂಬೂ ಸವಾರಿಯ ಅಂತ್ಯದ ವೇಳೆ ನಿನ್ನೆ ಅವಘಡವೊಂದು ಸಂಭವಿಸುತ್ತು. ಆನೆ ಪ್ರಶಾಂತನ ಮಾವುತ ಚಿನ್ನಪ್ಪ ದಿಢೀರ್ ಎಂಬಂತೆ ನೆಲಕ್ಕೆ ಬಿದ್ದು ಗಾಯಗೊಂಡಿದ್ರು. ಸದ್ಯ ಚಿನ್ನಪ್ಪ ಸುಧಾರಿಸಿಕೊಳ್ತಿದ್ದಾರೆ. ಅವ್ರಿಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ಕೊಡಿಸುತ್ತಿದ್ದಾರೆ .ಒಟ್ಟಾರೆ ವಿಶ್ವವಿಖ್ಯಾತಿಯ 407 ನೇ ಮೈಸೂರು ದಸರಾ ಇತಿಹಾಸದ ಪುಟ ಸೇರಿದೆ. ಇನ್ನೊಂದು ದಸರಾ ಕಣ್ತುಂಬಿಕೊಳ್ಳಲು ಮುಂದಿನ ವರ್ಷದವರೆಗೆ ಕಾಯಬೇಕಾಗಿದೆ.

0

Leave a Reply

Your email address will not be published. Required fields are marked *