ಫೀಫಾ ವಿಶ್ವಕಪ್​ನಲ್ಲಿ ಹೊರಬೀಳ್ತಿವೆ ಅಚ್ಚರಿಯ ಫಲಿತಾಂಶಗಳು

ಫೀಫಾ ವಿಶ್ವಕಪ್​ ಕ್ರೇಝ್ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮತ್ತೊಂದೆಡೆ ಟೂರ್ನಿಯಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ಹೊರ ಬೀಳುತ್ತಿವೆ. ಬಲಿಷ್ಠ ತಂಡಗಳು ಗೋಲು ದಾಖಲಿಸಲು ಪರದಾಡಿದ್ರೆ. ಸದ್ದೇ ಇಲ್ಲದ ತಂಡಗಳು ದೊಡ್ಡ ತಂಡಗಳಿಗೆ ಭಾರಿ ಪೈಪೋಟಿ ನೀಡುತ್ತಿವೆ. ಹಾಗಾದ್ರೆ ಇಲ್ಲಿವರೆಗೂ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾದ ಪಂದ್ಯಗಳ್ಯಾವು ಅನ್ನೋದರ ಡಿಟೇಲ್​ ಈ ಸ್ಟೋರಿಯಲ್ಲಿ ಇದೆ.

ಫೀಪಾ ವಿಶ್ವಕಪ್​ ದಿನದಿಂದ ದಿನಕ್ಕೆ ತನ್ನ ಕ್ರೇಝ್​ ಹೆಚ್ಚಿಸಿಕೊಳ್ಳುತ್ತಿದೆ. ಕಾಲ್ಚೆಂಡಿನ ಅಭಿಮಾನಿಗಳು ಈ ಶ್ರೀಮಂತ ಆಟದ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ಈ ಬಾರಿ ಟೂರ್ನಿಯ ಪ್ರಾರಂಭದಲ್ಲೇ ಅಚ್ಚರಿಯ ಫಲಿತಾಂಶಗಳು ಹೊರಬರತ್ತಿವೆ. ಇದು ಪುಟ್ಬಾಲ್​ ಅಭಿಮಾನಿಗಳಿಗೆ ಶಾಕ್​ ನೀಡಿದೆ. ವಿಶ್ವಕಪ್​ ಆರಂಭಗೊಂಡು 7 ದಿನಗಳು ಕಳೆದಿದ್ದು ಆಶ್ಚರ್ಯಕರ ರೀತಿಯಲ್ಲಿ ಫಲಿತಾಂಶ ಹೊರಬೀಳುತ್ತಿದೆ. ಫೇವರಿಟ್​ ತಂಡಗಳು ಪಂದ್ಯ ಆರಂಭಕ್ಕೂ ಮೊದಲು ಗೆದ್ದೇ ಗೆಲ್ಲುತ್ತೇ ಎಂದು ಭವಿಷ್ಯವನ್ನೇ ನುಡಿಯಲಾಗಿರುತ್ತೆ. ಆದ್ರೆ ಪಂದ್ಯ ಮುಗಿದ ಬಳಿಕ ಚಿತ್ರಣವೇ ಬದಲಿ ಹೋಗುತ್ತಿದೆ. ಬಲಿಷ್ಠ ತಂಡಗಳೇ ಗೋಲು ಗಳಿಸಲು ಪರದಾಡುತ್ತಿವೆ.

ಎದುರಾಳಿಯೂ ಬಲಿಷ್ಠವಾಗಿದ್ರೆ ಸೋತರೂ, ಇಲ್ಲವೇ ಪಂದ್ಯ ಡ್ರಾಗೊಂಡ್ರೆ ಆಶ್ಚರ್ಯವಾಗಲ್ಲ. ಆದ್ರೆ ಎದುರಾಳಿ ಟೀಮ್​ ವೀಕ್​ ಆಗಿದ್ರೂ ಕೂಡ ಸ್ಟ್ರಾಂಗ್ ಟೀಮ್​ವೊಂದು ಮುಗ್ಗರಿಸಿದಾಗ ಶುರುವಾಗೋ ಚರ್ಚೆಗಳು ಅಷ್ಟಿಷ್ಟಲ್ಲ. ಹಾಗೇ ಈ ಬಾರಿ ವಿಶ್ವಕಪ್​​ನಲ್ಲಿ ಹಾಲಿ ಚಾಂಪಿಯನ್​ ಜರ್ಮನಿ ಕೂಡ ದೊಡ್ಡ ಮಟ್ಟದ ಡಿಬೇಟ್​​ಗೆ ಕಾರಣವಾಗಿದೆ. ವಿಶ್ವಕಪ್​​​ನಲ್ಲಿ ತನ್ನ ಆರಂಭಿಕ ಪಂದ್ಯದಲ್ಲೇ ಮೆಕ್ಸಿಕೊ ದಾಳಿಗೆ ತಬ್ಬಿಬ್ಬಾಗಿ ಹೋಗಿದೆ.

ಮೆಕ್ಸಿಕೋ ವಿಶ್ವದ ನಂಬರ್ 1 ಟೀಮ್ ಜರ್ಮನಿಯನ್ನ 1-0 ಗೋಲಿನಿಂದ ಮಣಿಸಿದೆ. ಪರಿಣಾಮ ಮೆಕ್ಸಿಕೋ ಸಿಟಿ ಸೇರಿದಂತೆ ದೇಶಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.ಪ್ರತಿಭಾವಂತ ಆಟಗಾರ ಲೊಜಾನೊ ಹಿರ್ವಿಂಗ್ 35ನೇ ನಿಮಿಷದಲ್ಲಿ ಸಿಡಿಸಿದ ಗೋಲು ಮೆಕ್ಸಿಕೊ ಗೆಲುವಿಗೆ ಕಾರಣವಾಗಿದೆ. ಇದರಿಂದ ಮೆಕ್ಸಿಕೊ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಫಿಫಾ ವಿಶ್ವಕಪ್​​ಗೆ ಮೊದಲ ಬಾರಿಗೆ ಅರ್ಹತೆ ಪಡೆದಿದ್ದ ಐಸ್​ ಲ್ಯಾಂಡ್ ಕೂಡ ಯಾರೂ ನಿರೀಕ್ಷದ ಮಟ್ಟಿಗೆ ಫಲಿತಾಂಶ ನೀಡಿದೆ. ಪೆನಾಲ್ಟಿ ಅವಕಾಶಗಳನ್ನು ಕೈಚೆಲ್ಲುವುದರ ಜತೆಗೆ ರಕ್ಷ ಣಾ ವೈಫಲ್ಯ ಅನುಭವಿಸಿದ ಪ್ರಶಸ್ತಿ ಫೇವರಿಟ್‌ ಅರ್ಜೆಂಟೀನಾ, ಐಸ್‌ಲೆಂಡ್‌ ವಿರುದ್ಧ ಕೇವಲ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತಗೊಂಡು, ತಲಾ ಒಂದು ಅಂಕ ಹಂಚಿಕೊಂಡಿತು.

ಇನ್ನು ಗೆಲುವಿಗೆ ಸಿಕ್ಕ ಒಂದು ಅವಕಾಶವನ್ನು ಅರ್ಜೆಂಟೀನಾ ಕೈ ಚೆಲ್ಲಿದ್ದು ಅಭಿಮಾನಿಗಳಿಗೆ ಭಾರೀ ಆಘಾತ ನೀಡಿತು. ಎದುರಾಳಿ ಆಟಗಾರರ ಪ್ರಮಾದದಿಂದಾಗಿ 64ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ಸ್ಪಾಟ್‌ ಕಿಕ್‌ ಅವಕಾಶ ಸಿಕ್ಕಿತು . ಆದ್ರೆ ಎದುರಾಳಿ ಗೋಲ್​ ಕೀಪರ್​​ನ ಅದ್ಭುತ ಕೈ ಚಳಕದಿಂದಾಗಿ ಲಿಯೋನೆಲ್​ ಮೆಸ್ಸಿಯ ಯತ್ನ ವಿಫಲಗೊಂಡಿತು. ಜೊತೆಗೆ ಪಂದ್ಯದುದ್ದಕ್ಕೂ ಮೆಸ್ಸಿ ನಡೆಸಿದ ಗೋಲಿನ ಯತ್ನಗಳನ್ನು ಎದುರಾಳಿ ಆಟಗಾರರು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಪಂದ್ಯ 1-1 ರಿಂದ ಡ್ರಾನಲ್ಲಿ ಅಂತ್ಯವಾಯ್ತು.

ಹೀಗೆ ಜರ್ಮನಿ, ಅರ್ಜೆಂಟೀನಾದಂತಹ ಬಲಿಷ್ಠ ಹಾಗೂ ಪ್ರಶಸ್ತಿ ಗೆಲುವಿನ ಫೇವರಿಟ್​ ತಂಡಗಳೇ ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲಿ ಗೋಲು ಗಳಿಸಲು ಪರದಾಡಿವೆ. ಮತ್ತೊಂದೆಡೆ ಐಸ್​ಲ್ಯಾಂಡ್​​, ಮೆಕ್ಸಿಕೊ ರಾಷ್ಟ್ರಗಳು ಯಾರೂ ಊಹಿಸದ ರೀತಿಯಲ್ಲಿ ಪರ್ಫಾಮೆನ್ಸ್ ನೀಡುವ ಮೂಲಕ ಅಚ್ಚರಿ ಮೂಡಿಸಿವೆ. ಈ ಫಲಿತಾಂಶದಿಂದಾಗಿ ಉಳಿದೆಲ್ಲಾ ಬಲಿಷ್ಠ ರಾಷ್ಟ್ರಗಳು ತಮ್ಮ ಎದುರಾಳಿ ತಂಡವನ್ನ ಹಗುರವಾಗಿ ಪರಿಗಣಿಸದೆ ಇರಲು ತೀರ್ಮಾನಿಸಿವೆಯಂತೆ.

0

Leave a Reply

Your email address will not be published. Required fields are marked *