ಜೀವನಶೈಲಿಯ ಬದಲಾವಣೆಯೊಂದಿಗೆ ಗೊರಕೆ ನಿಗ್ರಹಿಸುವುದು

ಗೊರಕೆ ಎಂಬುದು ನಮಗಿಂತ ನಮ್ಮ ಅಕ್ಕ-ಪಕ್ಕ ಮಲಗಿದವರಿಗೇ ತುಂಬಾ ತೊಂದರೆ ಕೊಡುವಂತಹದ್ದು. ಗೊರಕೆ ಹೊಡೆಯುವವರ ಪಕ್ಕ ಮಲಗಿದರೆ ಆ ರಾತ್ರಿ ನಮ್ಮ ಪಾಲಿಗೆ ನರಕದ ರಾತ್ರಿಯೇ ಸರಿ. ಆದರೆ ಗೊರಕೆ ಹೊಡೆಯುವವರ ಪಕ್ಕ ಮಲಗಿದವರೂ ಅವರೇ ಆದರೆ ತೊಂದರೆ ಏನಿಲ್ಲ ಬಿಡಿ. ಇಡೀ ರಾತ್ರಿ ಒಬ್ಬರಿಗೊಬ್ಬರು ಲಾಲಿ ಹಾಡಿದಂತಾಗುತ್ತೆ. ಗೊರಕೆ ಹೊಡೆದು ನಿಮ್ಮ ನಿದ್ರೆಯ ಗುಣಮಟ್ಟವನ್ನು ದುರ್ಬಲಗೊಳಿಸಿಕೊಂಡು ಇನ್ನೊಬ್ಬರಿಗೆ ತೊಂದರೆ ಕೊಡುವ ಬದಲು. ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ತರುವುದರಿಂದ ಗೊರಕೆಯನ್ನು ನಿಗ್ರಹಿಸಬಹುದು.

1. ನಿಮ್ಮ ತೂಕ ಅಧಿಕವಿದ್ದರೆ ಕೇವಲ 10 ಪೌಂಡುನಷ್ಟು ತೂಕ ಕಳೆದುಕೊಳ್ಳಲು ಪ್ರಯತ್ನಿಸಿ.

2. ಮೇಲ್ಮುಖವಾಗಿ ಮಲಗುವ ಬದಲು ಯಾವುದಾದರು ಒಂದು ಬದಿಯಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಡಬದಿ ಮಲಗಿದರೆ ಉತ್ತಮ.

3. ಮದ್ಯ ಮತ್ತು ಕೆಫೀನ್​​​​ಗಳನ್ನು ತ್ಯಜಿಸಿ.

4. ಮಲಗುವ ಸುಮಾರು 2 ಗಂಟೆ ಮೊದಲು ಭಾರೀ ಊಟವನ್ನು ತಿನ್ನಬೇಡಿ.

5. ನಿದ್ರೆಯ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ, ಅದು ನಿಮ್ಮ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಗೊರಕೆಯನ್ನು ಹೆಚ್ಚಿಸುತ್ತದೆ.

0

Leave a Reply

Your email address will not be published. Required fields are marked *