ಸಖತ್​ ಫಾರ್ಮ್​​ನಲ್ಲಿದ್ದಾರೆ ಕೆಎಲ್​​…

ಪ್ರಸಕ್ತ ವರ್ಷದ ಐಪಿಎಲ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಅಬ್ಬರಿಸಿದ ಪ್ಲೇಯರ್​​ ಕೆ.ಎಲ್​ ರಾಹುಲ್​. ಈ ಆಟಗಾರ ಆಟಕ್ಕೆ ಬೋಲ್ಡ್​ ಆಗದವರೇ ಇಲ್ಲ. ರಾಹುಲ್​ ಅಂಗಳದಲ್ಲಿ ಬಾರಿಸುವ ಸಿಕ್ಸರ್​, ಬೌಂಡರಿಗಳು ತಂಡದ ರನ್​ ರೇಟ್​ ಹೆಚ್ಚು ಮಾಡ್ತಾ ಇದ್ದರೆ, ಇತ್ತ ಹೆಣ್ಮಕ್ಕಳ ದಿಲ್​​ಗೂ ರಾಹುಲ್​ ಆಟದ ವೈಖರಿ ಮುದ ನೀಡುತ್ತದೆ. ರಾಹುಲ್​ ಕರ್ನಾಟಕದ ಸ್ಟಾರ್ ಪ್ಲೇಯರ್​.. ರಣಜಿ ಕ್ರಿಕೆಟ್​ನಲ್ಲಿ ತ್ರಿಬಲ್​ ಸೆಂಚೂರಿ ಬಾರಿಸಿ ಎಲ್ಲರ ಗಮನ ಕದ್ದ ಆಟಗಾರ. ದುಲೀಪ್​ ಟ್ರೋಪಿಯಲ್ಲಿ ಆಡಿದ ಭರ್ಜರಿ ಪ್ರದರ್ಶನದ ಬಲದಿಂದ, ಈ ಪ್ಲೇಯರ್​ಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಲಭಿಸಿತು. ಸಿಕ್ಕ ಅವಕಾಶದಲ್ಲಿ ಹೇಗೆ ಮಿಂಚಬೇಕು ಎಂಬುದನ್ನು ಕರಗತ ಮಾಡಿಕೊಂಡ ರಾಹುಲ್​​ ಆಸ್ಟ್ರೇಲಿಯಾದಲ್ಲಿ ಮನಮೋಹಕ ಇನ್ನಿಂಗ್ಸ್​ ಆಡಿ ಅಭಿಮಾನಿಗಳ ಮನ ಗೆದ್ದಿದ್ದರು.

ಈ ಬಾರಿ ಕಿಂಗ್ಸ್​​ ಇಲೆವನ್​​ ಪಂಜಾಬ್​ ತಂಡ ಕಪ್​ ಗೆಲ್ಲುವಲ್ಲಿ ವಿಫಲವಾಗಿದ್ದು, ನಿಜ ಆದ್ರೆ ರಾಹುಲ್​ ಮಾತ್ರ ಸಕ್ಸಸ್​ ಕಂಡಿದ್ದಾರೆ. ಅಬ್ಬ ಇವರ ಸ್ಪೋಟದ ಆಟಕ್ಕೆ ಮನಸೋಲದವರೇ ಇಲ್ಲ. ಮೈದಾನದಲ್ಲಿ ಅಷ್ಟೇ ಅಲ್ಲ ರಾಹುಲ್​ ಮೈದಾನದ ಹೊರಗೂ ಸ್ಟೈಲಿಶ್​ ಆಗಿ ಇರುತ್ತಾರೆ. ಇವರ ಹೇರ್​ ಸ್ಟೈಲ್​, ಡ್ರೆಸ್ಸಿಂಗ್​, ಟ್ಯಾಟುಗಳಿಗೆ ಫಿದಾ ಆಗದವರೆ ಇಲ್ಲ. ಐಪಿಎಲ್​ ಮುಗಿದ ಬೆನ್ನಲ್ಲೆ ರಾಹುಲ್​​ ಬಾಲಿವುಡ್ ನಟಿ ನಿಧಿ ಅಗರ್​ವಾಲ್​ ಜೊತೆ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಾ ಇದೆ. ರಾಹುಲ್​ ನಿಧಿ ಜೊತೆಗೆ ಸುತ್ತಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯ ಟೀಮ್​ ಇಂಡಿಯಾದ ಅವಿಭಾಜ್ಯ ಅಂಗವಾಗಿ ಕಾಣಿಸಿಕೊಂಡಿರುವ ರಾಹುಲ್​, ತವರಿನಲ್ಲಿ ಆಫ್ಘಾನ್​ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೆ ಐರ್ಲೆಂಡ್​ ವಿರುದ್ಧ ಚುಟುಕು ಕ್ರಿಕೆಟ್​ನಲ್ಲೂ ಬ್ಲ್ಯೂ ಜೆರ್ಸಿ ತೊಡಲಿದ್ದಾರೆ.

0

Leave a Reply

Your email address will not be published. Required fields are marked *