ಚುಟುಕು ಕ್ರಿಕೆಟ್​ಗೆ ಆರಂಭದಲ್ಲೇ ಆಘಾತ..!

ವಿಶ್ವದೆಲ್ಲೆಡೆ ಸಖತ್ ಸದ್ದು ಮಾಡ್ತಿರೋ ಟಿ-20 ಕ್ರಿಕೆಟ್ ಅನ್ನೋ ಲೀಗ್ ಇದೀಗ ಸೌತ್ ಆಫ್ರೀಕಾದಲ್ಲಿ ಶುರುವಾಗಲಿದೆ. ಆದ್ರೇ, ಇದೇ ವರ್ಷಾಂತ್ಯದಲ್ಲಿ ಆರಂಭವಾಗಬೇಕಿದ್ದ ಈ ಚುಟುಕು ಕ್ರಿಕೆಟ್ ಲೀಗ್​ಗೆ ಇದೀಗ ಆರಂಭದಲ್ಲೇ ವಿಘ್ನ ಎದುರಾಗಿದೆ. ಅದೇನು ಬನ್ನಿ ನೊಡೋಣ.

ಆಫ್ರೀಕಾ ಟಿ-20 ಲೀಗ್​ಗೆ ಪ್ರಾಯೋಜಕರ ಕೊರತೆ

ಕ್ರಿಕೆಟ್ ಅನ್ನೋ ಜಂಟಲ್​ಮೆನ್​ ಗೇಮ್​ಗೆ ಈ ಚುಟುಕು ಕ್ರಿಕೆಟ್​ ಕಾಲಿಟ್ಟ ಮೇಲೆ ಅದರ ಚರಿಷ್ಮಾ ಬದಲಾಗಿದೆ. ಟೆಸ್ಟ್, ಓಡಿಐ ಕ್ರಿಕೆಟ್ ಕೂಡ ಇದರ ಮುಂದೆ ಮಂಕಾಗಿದೆ. ಕ್ರಿಕೆಟ್ ಆಡೋ ಎಲ್ಲಾ ರಾಷ್ಟ್ರಗಳಲ್ಲೂ ಇದೀಗ ಚುಟುಕು ಕ್ರಿಕೆಟ್ ಶುರುವಾಗಿದೆ. ಟಿ-20 ಅನ್ನೋ ಈ 20 ಓವರ್​ಗಳ ಕ್ರಿಕೆಟ್​ ಇವತ್ತು ಅಭಿಮಾನಿಗಳ ಹಾಟ್ ಫೇವರಿಟ್ ಎನಿಸಿಕೊಂಡಿದೆ.

ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕ್ರಿಕೆಟ್ ಲೀಗ್​ಗಳು ಶುರುವಾಗಿವೆ. ಭಾರತದಲ್ಲಿ ಐಪಿಎಲ್, ಆಸ್ಟ್ರೇಲಿಯಾ ಬಿಗ್​ಬ್ಯಾಶ್, ವೆಸ್ಟ್​ ಇಂಡೀಸ್​ನಲ್ಲಿ ಕೆರಿಬಿಯನ್ ಲೀಗ್, ಪಾಕಿಸ್ತಾನದಲ್ಲಿ ಪಾಕ್ ಪ್ರಿಮಿಯರ್ ಲೀಗ್ ಆರಂಭವಾಗಿವೆ. ಇದೇ ಮಾದರಿಯಲ್ಲಿ ಇದೀಗ ದಕ್ಷಿಣ ಆಫ್ರೀಕಾ ಕೂಡ ಚುಟುಕು ಕ್ರಿಕೆಟ್ ಲೀಗ್​​ ಆಯೋಜನೆಗೆ ಮುಂದಾಗಿದೆ.

ದಕ್ಷಿಣ ಆಫ್ರಿಕಾ ಟಿ-20 ಗ್ಲೋಬಲ್ ಲೀಗ್ ನಲ್ಲಿ ಈಗಾಗಲೇ 8 ತಂಡಗಳ ಪಟ್ಟಿಯನ್ನ ಕೂಡ ಸಿದ್ದಪಡಿಸಲಾಗಿದೆ. ಈಗಾಗಲೇ ಆಟಗಾರರ ಬಿಡ್ಡಿಂಗ್ ಕೂಡ ನಡೆದಿದ್ದು, ಇದೇ ನವೆಂಬರ್​ 3 ರಿಂದ ಶುರುವಾಗಬೇಕಿದ್ದ ಟೂರ್ನಿಗೆ ಆರಂಭದಲ್ಲೇ ಆಘಾತವಾಗಿದೆ. ಟೂರ್ನಿಗೆ ಇದೀಗ ಪ್ರಾಯೋಜಕರ ಕೊರತೆಯಾಗಿದ್ದು, ಹೀಗಾಗಿ ಟೂರ್ನಿಯನ್ನ ನಡೆಸೋಕೆ ಸೌತ್ ಆಫ್ರೀಕಾ ಕ್ರಿಕೆಟ್ ಮಂಡಳಿ ಹಿಂದೇಟು ಹಾಕ್ತಿದೆ.

ಟೂರ್ನಿಯ ಪ್ರಸಾರದ ಹಕ್ಕು ಹಾಗೂ ಟೈಟಲ್ ಸ್ಪಾನರ್ಸ್ ಇನ್ನು ಸಿಗದ ಕಾರಣ ಈ ಲೀಗ್​​ನ್ನ ಮುಂದಿನ ವರ್ಷ ನಡೆಸೋಕೆ ಮಂಡಳಿ ನಿರ್ಧರಿಸಿದೆ. ಆದ್ರೇ, ದಿನಾಂಕವನ್ನ ಮಾತ್ರ ಇನ್ನು ಪ್ರಕಟಿಸಿಲ್ಲ.

ಒಟ್ನಲ್ಲಿ ಹಣದ ಹೊಳೆ ಹರಿಸೋ ಟಿ-20 ಅನ್ನೋ ಈ ಚುಟುಕು ಕ್ರಿಕೆಟ್​ಗೆ ಇದೀಗ ಪ್ರಾಯೋಜಕರ ಕೊರತೆ ಎದ್ದು ಕಾಣ್ತಿದ್ದು, ತಂಡವನ್ನ ಖರೀದಿಸಿರೋ ಪ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದಡೆ ತಮ್ಮ ದೇಶದಲ್ಲೇ ಚುಟುಕು ಕ್ರಿಕೆಟ್​ನ್ನ ಕಣ್ತುಂಬಿಕೊಳ್ಳೊ ಸೌಭಾಗ್ಯ ಅಭಿಮಾನಿಗಳಿಗೆ ದೂರವಾದ್ದಂತಾಗಿದೆ.

ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *