ಬಾಲಕನ ಮೇಲೆ ಕ್ರಿಕೆಟ್​ ಕೋಚ್​ ಗಂಭೀರ ಹಲ್ಲೆ

ನಿರೀಕ್ಷೆಯಂತೆ ಹೆಚ್ಚು ರನ್ ಗಳಿಸದಿದ್ದಕ್ಕೆ ಕ್ರಿಕೆಟ್​ ಕೋಚ್​ನಿಂದ ಬಾಲಕನ ಮೇಲೆ ಮಾರಣಂತಿಕ ಹಲ್ಲೆ ನಡೆಸಿದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಸವನಗುಡಿ ಕ್ರಿಕೆಟ್​ ಆಕಾಡೆಮಿ ನಡೆಸುತ್ತಿರುವ ಬಿ.ಕೆ.ರವಿ ಪ್ರತಿಷ್ಠೆಗೆ ಕುತ್ತು ತರಲು ಸಂಚು ಹೂಡಲಾಗಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಬಿಕೆ ರವಿ, ಹಲ್ಲೆಗೊಳಗಾದ ಬಾಲಕನ ಪೋಷಕರಿಂದ ತಮ್ಮ ಮಗನನ್ನ ಜೋನಲ್ ಪಂದ್ಯವಾಳಿಗೆ ಆಯ್ಕೆ ಮಾಡುವಂತೆ ಒತ್ತಡವಿತ್ತು. ಇದಕ್ಕೆ ನಿರಾಕರಿಸಿದ್ದಕ್ಕೆ ಈ ರೀತಿಯಾಗಿ ಪೋಷಕರು ದೂರಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆಗೊಳಗಾದ ಬಾಲಕ ನಮ್ಮ ಅಕಾಡಮಿಯ ವಿದ್ಯಾರ್ಥಿಯಲ್ಲ, ಕೋಚ್ ರಮಣನ ದೂರ ಸಂಬಂಧಿ ಎಂದು ಬಿಕೆ ರವಿ ಹೇಳಿದ್ದಾರೆ. 13 ವರ್ಷದ ಬಾಲಕನ ಎದೆ, ಹೊಟ್ಟೆ ಭಾಗಕ್ಕೆ ಕೋಚ್ ರಮಣ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ದೂರಲಾಗಿತ್ತು.

0

Leave a Reply

Your email address will not be published. Required fields are marked *