ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವಿರೋಧಿ ತತ್ವ ಎಂದ ಸಿಪಿಐ(ಎಂ)

ದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳ ಪ್ರಶ್ನೆ ಕುರಿರು ಭಾರತದ ಕಾನೂನು ಆಯೋಗ ಸಿಪಿಐ(ಎಂ)ನ ಅಭಿಪ್ರಾಯ ಕೋರಿ ಬರೆದ ಪತ್ರಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಉತ್ತಸಿದ್ದಾರೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ವಿರುದ್ಧದ ತರ್ಕ ಕೇವಲ ತಾಂತ್ರಿಕ ಸ್ವರೂಪದ್ದೂ ಅಲ್ಲ ಅಥವಾ ಅದು ಕಾರ್ಯಸಾಧ್ಯವಲ್ಲ ಎಂಬುದಕ್ಕೂ ಅಲ್ಲ. ಏಕಕಾಲದಲ್ಲಿ ಚುನಾವಣೆ ಎಂಬ ಈ ಪರಿಕಲ್ಪನೆಯೇ ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಈ ಪ್ರಸ್ತಾವನೆ ಸಂವಿಧಾನ ವಿಧಿಸಿರುವ ಸಂಸದೀಯ ಪ್ರಜಾಪ್ರಭುತ್ವದ ಬುಡಕ್ಕೇ ಏಟು ಕೊಡುತ್ತದೆ ಎಂಬುದೇ ಈ ನಿರ್ಧಾರದ ಕುರಿತು ಇರುವ ಮೂಲ ಆಕ್ಷೇಪ ಎಂದು ಅವರು ಹೇಳಿದ್ದಾರೆ. ಜೊತೆಗೆ, ನಾನು ನಿಮ್ಮ 14 ಜೂನ್ 2018ರ ಪತ್ರಕ್ಕೆ ಸ್ಪಂದಿಸುತ್ತ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪತ್ರದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಶ್ನೆಯ ಮೇಲೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಅಭಿಪ್ರಾಯವನ್ನು ಕೇಳಿದ್ದೀರಿ ಎಂದಿದ್ದಾರೆ. ನಿಮ್ಮ ಪತ್ರಕ್ಕೆ ಸ್ಪಂದಿಸಿ ನಾನು ಇಂಥ ಪ್ರಸ್ತಾವನೆಗೆ ಸಿಪಿಐ(ಎಂ)ನ ಪರ್ಯಾಲೋಚಿಸಿದ ಆಕ್ಷೇಪಗಳನ್ನು ಸಲ್ಲಿಸದ್ದೇನೆ ಎಂದು ಅವರು ಪತ್ರ ಮುಖೇನ ಉತ್ತರಿಸಿದ್ದಾರೆ.

0

Leave a Reply

Your email address will not be published. Required fields are marked *