ದರೋಡೆಗಿಳಿದ ಗೋರಕ್ಷಕರು

ಶ್ರೀನಗರ: ಒಂಬತ್ತು ವರ್ಷದ ಬಾಲಕಿ ಸೇರಿದಂತೆ ಒಟ್ಟು 5 ಜನರ ಮೇಲೆ ಗೋರಕ್ಷಕರು ಜಮ್ಮು ಮತ್ತು ಕಾಶ್ಮೀರದ ರೀಸಿ ಜಿಲ್ಲೆಯಲ್ಲಿ ಹಲ್ಲೆ ನಡೆಸಿದ್ದಾರೆ. ತಲ್ವಾರ ಪ್ರದೇಶದಲ್ಲಿ ದನಗಳೊಂದಿಗೆ ತೆರಳುತ್ತಿದ್ದ ಕುಟಂಬದ ಮೇಲೆ ಗೋರಕ್ಷಕರು ದಾಳಿ ನಡೆಸಿದ್ದಾರೆ. ಅಲ್ಲದೇ, ದನಗಳನ್ನು ಎಳೆದೊಯ್ದಿದ್ದಾರೆ. ದೊಡ್ಡ ಗುಂಪೊಂದು ಕುಟುಂಬದ ಮೇಲೆ ಹಲ್ಲೆ ದಾಳಿ ನಡೆಸಿದೆ. ತಮ್ಮ ಆಡು, ಕುರಿ ಮತ್ತು ಹಸುಗಳನ್ನೆಲ್ಲ ಗೋರಕ್ಷಕರು ಕೊಂಡೊಯ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ದಾಳಿ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಐವರನ್ನು ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಎಫ್​​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕೂಡ ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *