ಅಭ್ಯರ್ಥಿಗಳ ಟಿಕೆಟ್​ ಫೈನಲ್ ಮಾಡಿದ ಕಾಂಗ್ರೆಸ್..

ಮುಂದಿನ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್​ನಲ್ಲಿ ಗರಿದೆರಿದ ರಾಜಕೀಯ ಬೆಳೆವಣಿಗೆಯಾಯ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಇಂದು ಖಾಸಗಿ ರೆಸಾರ್ಟ್​ನಲ್ಲಿ ಕಾಂಗ್ರೆಸ್​​ ಅಭ್ಯರ್ಥಿಗಳಿಗೆ ಟಿಕೆಟ್​ ಫೈನಲ್ ಸಭೆ ನಡೆದಿದ್ದು, ಇದಕ್ಕೀನೇನು ಹೈಕಮಾಂಡ್ ಅಂತಿಮ ಮುದ್ರೆ ಒತ್ತುವುದಷ್ಟೇ ಬಾಕಿಯಿದೆ.. ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ನಲ್ಲಿ ರಾಜಕೀಯ ಬೆಳವಣಿಗೆಗಳು ಗರಿದೆರಿದರುತ್ತಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​​ ಅಭ್ಯರ್ಥಿಗಳಿಗೆ ಟಿಕೆಟ್​ ಫೈನಲ್​ ಮಾಡಲು ಇಂದು ಖಾಸಗಿ ರೆಸಾರ್ಟ್​ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಿತು.. ಇನ್ನು ಸಭೆಯಲ್ಲಿ 44 ಮಂದಿ ಚುನಾವಣಾ ಸಮಿತಿ ಸದಸ್ಯರ ಜತೆಗೆ ಚರ್ಚೆ ನಡೆಸಲಾಯಿತು. ಜೊತೆಗೆ ಇದೇ ವೇಳೆ ಬೆಂಗಳೂರು, ಮೈಸೂರು, ಬೆಳಗಾವ್ ಹಾಗೂ ಕಲಬುರಗಿ ವಿಭಾಗಗಳಾಗಿ ವಿಂಗಡಿಸಿ ಆಯಾ ವಿಭಾಗಕ್ಕೆ ಒಬ್ಬೊಬ್ಬ ಮುಖ್ಯಸ್ಥರನ್ನ ನೇಮಿಸಲಾಯ್ತು..

ವಿಭಾಗಗಳಿಗೆ ಚುನಾವಣಾ ಸಂಚಾಲಕರಾಗಿ ನೇಮಕವಾದವರ ಪಟ್ಟಿ..
– ಬೆಂಗಳೂರು – ಡಿ.ಕೆ ಶಿವಕುಮಾರ್
– ಮೈಸೂರು – ದಿನೇಶ್ ಗುಂಡೂರಾವ್
– ಬೆಳಗಾವಿ – ಎಸ್.ಆರ್ ಪಾಟೀಲ್
– ಗುಲ್ಬರ್ಗ – ಬಿ.ಕೆ ಹರಿಪ್ರಸಾದ್

ಇನ್ನು ಸಭೆಯಲ್ಲಿ ವಿಭಾಗಗನ್ನ ವಿಂಗಡಿಸಿ ಆಯಾ ವಿಭಾಗಕ್ಕೆ ಒಬ್ಬೊಬ್ಬ ಮುಖ್ಯಸ್ಥರನ್ನ ನೇಮಿಸಲಾಗಿದೆ. ಬೆಂಗಳೂರು ವಿಭಾಗಕ್ಕೆ ಡಿ.ಕೆ ಶಿವಕುಮಾರ್, ಮೈಸೂರು ವಿಭಾಗಕ್ಕೆ ದಿನೇಶ್ ಗುಂಡುರಾವ್, ಹಾಗೇ ಬೆಳಗಾವಿ ವಿಭಾಗಕ್ಕೆ ಎಸ್​.ಆರ್​ ಪಾಟೀಲ್​ ಜೊತೆಗೆ ಗುಲ್ಬರ್ಗಾ ವಿಭಾಗಕ್ಕೆ ಬಿ.ಕೆ ಹರಿಪ್ರಸಾದ್​​ರನ್ನ ನೇಮಕ ಮಾಡಲಾಗಿದೆ.. ಇದ್ರಂತೆಯೇ ವಿಭಾಗದ ಮುಖ್ಯಸ್ಥರು ಆಯಾಯಾ ವಿಭಾಗದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಅರ್ಜಿ ಪರಿಶೀಲಿಸಿ ಪ್ರತಿ ಕ್ಷೇತ್ರಕ್ಕೆ 3 ಹೆಸರುಗಳನ್ನು ಫೈನಲ್ ಮಾಡಲಿದ್ದಾರೆ.

ಅಭ್ಯರ್ಥಿಗಳ ಆಯ್ಕೆಗೆ ಮಾರ್ಗಸೂಚಿಗಳು
– ಭ್ರಷ್ಟರಿಗೆ ಟಿಕೆಟ್ ಇಲ್ಲ
– ಒಂದು ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಟಿಕೆಟ್ ಕೊಡಬಹುದು
– 2013ರಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಸೋತ ಅಭ್ಯರ್ಥಿಗಳು ಸಮೀಕ್ಷೆಯಲ್ಲಿ ಗೆಲ್ಲುವ ಮಾಹಿತಿಯಿದ್ರೆ ಮಾತ್ರ ಟಿಕೆಟ್
– ಗೆಲ್ಲುವ ಅಭ್ಯರ್ಥಿಗೆ ವಯಸ್ಸಿನ ಮಿತಿ ಬೇಡ
– ಟಿಕೆಟ್ ಫೈನಲ್ ಹೈಕಮಾಂಡ್​ಗೆ ಬಿಟ್ಟದ್ದು

ಇನ್ನು ಈ ಮಾನದಂಡಗಳ ಆಧಾರದಲ್ಲಿ ಟಿಕೆಟ್ ಫೈನಲ್ ಆಗಲಿದೆ.. ಇಂದಿನ ಸಭೆಯಲ್ಲಿ ಸಿದ್ಧವಾಗೋ ಪಟ್ಟಿಯನ್ನು ಕುರಿತು ದೆಹಲಿಯಲ್ಲಿ ಮಾ.28 ರಂದು ನಡೆಯುವ ಸ್ಕ್ರಿನಿಂಗ್ ಕಮಿಟಿ ಮುಂದೆ ಇಡಲಾಗುತ್ತದೆ.. ಈಗ 2 ನೇ ಹಂತದ ಪಟ್ಟಿಗೆ ಹೈಕಮಾಂಡ್ ಅಂತಿಮ ಲಿಸ್ಟ್​ಗೆ ಮುದ್ರೆ ಒತ್ತಲಿದ್ದು, ಈ ಬಾರಿ ಪಕ್ಷ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳೊದೆ ಫೈನಲ್ ಅನ್ನೊ ಮಾತನ್ನ ಸ್ಪಷ್ಟಪಡಿಸಲಾಗಿದೆ…ಒಟ್ನಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪ್ರಾಥಮಿಕ ಟಿಕೆಟ್ ಹಂಚಿಕೆ ಪ್ರಕ್ರಿಯೆ ಇಂದು ನಡೆದಿದ್ದು, ಈ ಎಲ್ಲ ಸಭೆಗಳು ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮಾರ್ಚ್ ಅಂತ್ಯಕ್ಕೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ…
=======
ನಂದಿನಿ, ಪೊಲಿಟಿಕಲ್ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *