ಕಾಂಗ್ರೆಸ್‍ ನನ್ನನ್ನು ಕೊಲ್ಲುವ ಕನಸು ಕಾಣುತ್ತಿದೆ: ನರೇಂದ್ರ ಮೋದಿ

ಭೋಪಾಲ್: ಕಾಂಗ್ರೆಸ್‍ನವರಿಗೆ ನಿಮ್ಮ ಮೋದಿಯ ಮೇಲೆ ಎಷ್ಟು ದ್ವೇಷವಿದೆ ಎಂದರೆ, ಅವರು ಮೋದಿಯವರನ್ನು ಕೊಲ್ಲುವ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಪಕ್ಷದ ಅಭ್ಯರ್ಥಿಗಳ ಪರ ಮಧ‍್ಯಪ್ರದೇಶದ ಇತಾರ್ಸಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ವೇಳೆ ಅವರು ಈ ಆರೋಪವನ್ನು ಮಾಡಿದರು.

ಶ್ರೀಲಂಕಾದಲ್ಲಿ ಸ್ಫೋಟ ಸಂಭವಿಸಿದ ನಂತರ ಅಲ್ಲಿನ ಸರ್ಕಾರ ಮಾಡಿದ ಮೊದಲನೇ ಕೆಲಸ ಜಕೀರ್ ನಾಯಕ್ ಟಿವಿಯನ್ನು ನಿಷೇಧ ಎಂದು ಪ್ರಧಾನಿ ಮೋದಿ ಹೇಳಿದರು. ಜೊತೆಗೆ, ಇದೇ ಜಕೀರ್ ನಾಯ್ಕ್ ದರ್ಬಾರ್‍ನಲ್ಲಿ ಡಿಗ್ಗಿ ರಾಜಾ (ದಿಗ್ವಿಜಯ್ ಸಿಂಗ್) ಕಾಣಿಸಿಕೊಂಡಿದ್ದರು. ಕಾಂಗ್ರೆಸ್ಸಿಗರೇ ನೀವು ಮುಳುಗಿ ಸಾಯಿರಿ! ಎಂದು ಅವರು ಶಾಪ ಹಾಕಿದರು.

0

Leave a Reply

Your email address will not be published. Required fields are marked *