ರಫೇಲ್ ಅವ್ಯವಹಾರ: ಕಾಂಗ್ರೆಸ್​​ನಿಂದ ದೆಹಲಿಯಲ್ಲಿ ಪ್ರತಿಭಟನೆ

ದೆಹಲಿ: ರಫೇಲ್ ಅವ್ಯವಹಾರ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಶಶಿ ತರೂರ್ ಕೂಡ ಕಪ್ಪುಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಇದೀಗ ಸದನದ ಒಳಗೆ ಮತ್ತು ಹೊರಗೆ ರಫೇಲ್ ಅವ್ಯಹಾರ ಪ್ರತಿಧ್ವನಿಸಿದ್ದು, ರಾಜ್ಯಸಭೆಯಲ್ಲಿ ರಫೇಲ್ ಅವ್ಯವಹಾರ ಕುರಿತು ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2:30ರವರೆಗೆ ಮುಂದೂಡಲಾಗಿದೆ.

0

Leave a Reply

Your email address will not be published. Required fields are marked *