ಕಾಮನ್ ವೆಲ್ತ್ ಗೇಮ್ಸ್ ಗೆ ಅದ್ದೂರಿ ತೆರೆ…

ಸತತ 12 ದಿನಗಳ ಕಾಲ ವಿಶ್ವವನ್ನು ರಂಜಿಸಿದ್ದ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇದೇ ಮೊದಲ ಬಾರಿಗೆ ಭಾರತಕ್ಕೆ 3ನೇ ಸ್ಥಾನ ಲಭಿಸುವಂತೆ ಮಾಡಿದ್ದಾರೆ. 12 ದಿನದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ‍ಪಟುಗಳು 26 ಚಿನ್ನದ ಪದಕಗಳನ್ನು ಗೆದ್ದು, 20 ಬೆಳ್ಳಿ 20 ಕಂಚಿನ ಪದಕಗಳು ಸೇರಿದಂತೆ ಒಟ್ಟು 66 ಪದಕಗಳನ್ನು ರಾಷ್ಟ್ರಕ್ಕೆ ಗಳಿಸಿಕೊಟ್ಟಿದ್ದಾರೆ. ಇದರೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಆ ಮೂಲಕ ಭಾರತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ಸಾಧನೆ ತೋರಿದೆ. 80 ಚಿನ್ನದ ಪದಕ ಗಳಿಸುವ ಮೂಲಕ ಆಸ್ಟ್ರೇಲಿಯಾ ಮೊದಲನೇ ಸ್ಥಾನ ಪಡೆದಿದ್ದರೆ, 45 ಚಿನ್ನ ಗೆದ್ದು ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದೆ. ಇನ್ನು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಕ್ರಮವಾಗಿ ಕೆನಡಾ ಹಾಗೂ ನ್ಯೂಜಿಲೆಂಡ್‌ ಸ್ಥಾನ ಪಡೆದಿದೆ.

0

Leave a Reply

Your email address will not be published. Required fields are marked *