ಕಲರ್​ಫುಲ್​ ಕಾಟನ್​ ಸಿಲ್ಕ್​ ಮೇಳ….

ಶಾಪಿಂಗ್​ ಪ್ರಿಯರಿಗಾಗಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಕಲರ್​ಫುಲ್​ ಕಾಟನ್​ ಸಿಲ್ಕ್​ ಮೇಳ ಇಂದಿನಿಂದ ಆರಂಭಗೊಂಡಿದೆ. ಸೆಪ್ಟೆಂಬರ್​ 5ವರೆಗೂ ಮೇಳ ನಡೆಯಲಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನು ಆಕರ್ಷಿಸ್ತಿದೆ..ಜೈಪುರಿ ಜುಮಕಿ, ಒರಿಸ್ಸಾ ಪಟಚಿತ್ರ, ರಾಜಾಸ್ತಾನಿ ಕಲಾತ್ಮಕ ಕನ್ನಡಿ, ಕಲ್ಕತ್ತಾ ಸೀರೆ, ಹುಬ್ಬಳ್ಳಿ ಇಳಕಲ್​ ಸೀರೆ.. ಹೀಗೆ ಕೊಳ್ಳೋರಿಗೆ ಅಲ್ಲಿ ವಿಭಿನ್ನ ವೆರೈಟಿ ವಸ್ತ್ರಗಳು, ಆಭರಣಗಳು, ಅಲಂಕಾರಿಕ ವಸ್ತುಗಳು ಕೈಬೀಸಿ ಕರೆಯುತ್ತಿದ್ವು.. ಇಂತಹ ಒಂದು ಕಲರ್​ಫುಲ್​ ಕಾಟನ್​-ಸಿಲ್ಕ್​ ಮೇಳ ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್​ 5ರವರೆಗೆ ನಡೆಯಲಿದೆ..

ರಾಜಸ್ಥಾನ, ಕಾಶ್ಮೀರ, ಒರಿಸ್ಸಾ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಒಳಗೊಂಡಂತೆ ವಿವಿಧ ರಾಜ್ಯಗಳ ಕರಕುಶಲಕರ್ಮಿಗಳು ಮೇಳದಲ್ಲಿ ಮಳಿಗೆಗಳನ್ನ ಹಾಕಿದ್ದಾರೆ. ಮೇಳದಲ್ಲಿ ಚನ್ನಪಟ್ಟಣದ ಬೊಂಬೆ, ಪಂಜಾಬ್​ನ ಫುಲ್​ಕಾರಿ ಡ್ರೆಸ್​, ಟೆರ್ರಾಕೋಟ ಆಭರಣಗಳು, ಕಲಂಕಾರಿ ಬ್ಯಾಗ್​ ಒಳಗೊಂಡಂತೆ ಬಹುತೇಕ ವಸ್ತುಗಳು ಸಾಂಪ್ರದಾಯಿಕ ಪರಂಪರೆಯನ್ನ ಹೊಂದಿರೋ ಕಾರಣ ಜನ್ರನ್ನ ಸೆಳೆಯುತ್ತಿವೆ.ಹೈದರಾಬಾದಿನಿಂದ ಬಂದಿರೋ ತಾಮ್ರದ ಪಾತ್ರೆಗಳು, ರಾಜಸ್ತಾನದ ವಿಭಿನ್ನ ತಿನಿಸು ಮೇಳದ ಆಕರ್ಷಣೆಯನ್ನ ಹೆಚ್ಚಿಸಿದೆ.ರಾಜಧಾನಿ ಬೆಂಗಳೂರಿನ ಯಾಂತ್ರಿಕ ಬದುಕಿನಲ್ಲಿ ತಮ್ಮವರ ಜೊತೆ ರಿಲ್ಯಾಕ್ಸ್​ ಆಗಿ ಮಾತನಾಡಲು ಸಮಯವಿರಲ್ಲ. ಹಾಗಿರುವಾಗ ಇಂತ ಮೇಳಗಳು, ಗ್ರಾಮೀಣಸೊಗಡಿನ ಸಿಂಚನ ನೀಡಿ, ಬದುಕಿನ ಮತ್ತೊಂದು ನೋಟವನ್ನ ಪರಿಚಯಿಸುತ್ತವೆ.

ರಮೇಶ್​ ಜೊತೆ ಶಶಿರೇಖಾ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *