ಗೋವಾ ಸ್ಪೀಕರ್ ವಿರುದ್ಧ ಸಿಎಂ ಕೆಂಡಾಮಂಡಲ

ಬೆಂಗಳೂರು: ಮಹದಾಯಿ ವಿವಾದಕ್ಕೆ ನಿರ್ಣಯ ನೀಡಲು ಗೋವಾ ಸ್ಪೀಕರ್ ಯಾರು..? ಎಂದು ಗೋವಾ ಸ್ಪೀಕರ್ ವಿರುದ್ದ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದರು. ವಿವಾದ ಪರಿಹರಿಸಲು ನ್ಯಾಯಾಧೀಕರಣವಿದೆ, ನ್ಯಾಯಾಲಯವಿದೆ. ರಾಜ್ಯಕ್ಕೆ ಕದ್ದು ಬಂದು ಹೋದವರಿಗೆ ನಾವು ಉತ್ತರ ಕೊಡಬೇಕಾಗಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ. ಕರ್ನಾಟಕದ ಜನತೆ ನಮ್ಮ ಪಾಲಿನ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಗೋವಾ ಸ್ಪೀಕರ್ ಮೊದಲೇ ತಿಳಿಸಿದ್ದರೆ ನಾವೇ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ, ಕಳ್ಳರ ತರಹ ರಾಜ್ಯಕ್ಕೆ ಬಂದು ಹೋಗುವ ಅಗತ್ಯವಿರಲಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

0

Leave a Reply

Your email address will not be published. Required fields are marked *