ಹಾವೇರಿ ಜಿಲ್ಲೆಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ

ಹಾವೇರಿ ಜಿಲ್ಲೆಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. 92 ಕೊಟಿ ವೆಚ್ಚದಲ್ಲಿ ನಿರ್ಮಾಣವಾದ ಅಸುಂಡಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 10:30ಕ್ಕೆ ಹಾವೇರಿಗೆ ತೆರಳಲಿದ್ದಾರೆ. ಇನ್ನು ತುಂಗಭದ್ರಾ ನದಿಯಿಂದ 0.188 ಟಿ ಎಂ ಸಿ ನೀರನ್ನು ಅಸುಂಡಿ ಕೆರೆಗೆ ತುಂಬಿಸಲಾಗುತ್ತೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಕೋಳಿವಾಡ, ಸಚಿವರುಗಳಾದ ಎಂ.ಬಿ ಪಾಟೀಲ್, ಎಚ್.ಕೆ ಪಾಟೀಲ್, ರುದ್ರಪ್ಪ ಲಮಾಣಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *