ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ…

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ರು. ರಾಯಚೂರಿನ ಯರಮರಸ್ ಬಳಿ ವೈ.ಟಿ.ಪಿ.ಎಸ್ ನಲ್ಲಿ ಸುಮಾರು 13 ಸಾವಿರ ಕೋಟಿ ಮೊತ್ತದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ರು..ಬಳಿಕ ಸಿಎಂ ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ಕಾಮಗಾರಿಗಳನ್ನು ಉಧ್ಘಾಟಿಸಿದ್ರು. ಈ ವೇಳೆ, ಸಚಿವರಾದ ಡಿ.ಕೆ.ಶಿವಕುಮಾರ್, ಹೆಚ್.ಎಂ.ರೇವಣ್ಣ ಭಾಗಿಯಾದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಹಸಿವು ಮುಕ್ತ ರಾಜ್ಯಕ್ಕಾಗಿ ನಮ್ಮದು ಧೃಡ ಸಂಕಲ್ಪ. ಆದ್ರೆ, ಅಮಿತ್ ಶಾ ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರ ಎನ್ನುತ್ತಾರೆಂದು ಕಿಡಿಕಾರಿದ್ರು. ಇದೇ ವೇಳೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿಲ್ವ, ಸಚಿವರು ಜೈಲಿಗೆ ಹೋಗಿದ್ದವರು, ಕೊಲೆ ಪ್ರಕರಣದಲ್ಲಿ ಅಮಿತ್ ಶಾನೇ ಜೈಲಿಗೆ ಹೋಗಿ ಬಂದವರು ಎಂದ್ರು. ಪ್ರಧಾನಿ ಮೋದಿ ಯಡಿಯೂರಪ್ಪರನ್ನು ಪಕ್ಕದಲ್ಲಿಟ್ಟುಕೊಂಡೇ ಭ್ರಷ್ಟ ಸರ್ಕಾರ ಎನ್ನುತ್ತಾರೆ. ನಮ್ಮ ಸರ್ಕಾರದ ಭ್ರಷ್ಟಾಚಾರದ ದಾಖಲೆಯಿದ್ದರೆ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ರು…

ಪ್ರಧಾನಿ ಮೋದಿ ದೇಶವನ್ನು ಚೌಕಿಧಾರನಾಗಿ ಕಾಯೋದಾಗಿ ಹೇಳಿದ್ರು. ಆದ್ರೆ, ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ದೇಶ ಬಿಟ್ಟುಹೋಗಿದ್ದಾರೆ. ಆದ್ರೆ, ಪ್ರಧಾನಿ ಈ ಬಗ್ಗೆ ಮಾತನಾಡೋದಿಲ್ಲ ಎಂದು ಹರಿಹಾಯ್ದರು. ಯಡಿಯೂರಪ್ಪ ನಾನು ರೈತರ ಮಗ ಅಂತಾರೆ, ಮೋದಿ ನಾನು ಮಣ್ಣಿನ ಮಗಾ ಅಂತಾರೆ ಆದ್ರೆ ನಾವ್ ಯಾರ್ ಮಕ್ಳು? ಎಂದು ಪ್ರಶ್ನಿಸಿದ ಸಿಎಂ, ರೈತರು ಗೊಬ್ಬರ ಕೇಳಿದ್ರೆ ರೈತರ ಮಗ ಗೋಲಿಬಾರ್ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ರು. ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ನೀರಾವರಿ ಅಭಿವೃದ್ಧಿ ಮಾಡುತ್ತಾರಂತೆ.ನಿಮ್ಮ ಅವಧಿಯಲ್ಲಿ ನೀರಾವರಿಗೆ ಎಷ್ಟು ಅನುದಾನದ ನೀಡಿದ್ದೀರಿ ಅಂತ ಸಿಎಂ ಪ್ರಶ್ನಿಸಿದ್ರು..ಈ ಮಧ್ಯೆ, ಬಿಜೆಪಿ ಮುಷ್ಠಿ ಅಕ್ಕಿ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯ ರೈತ ಸಮಾವೇಶದಲ್ಲಿ ಮುಷ್ಠಿ ಅಕ್ಕಿ ಅಭಿಯಾನ ಕೈಗೊಂಡಿರುವ ಬಿಜೆಪಿಯವರು ಅಧಿಕಾರಕ್ಕೆ ಬಂದ್ರೆ ಮುಷ್ಠಿ ಅಕ್ಕಿಯನ್ನೇ ಕೊಡ್ತಾರೆ ನೋಡಿ ಎಂದು . ಟ್ವೀಟ್​​​ನಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ…ಒಟ್ಟಾರೆ, ಭ್ರಷ್ಟ ಸರ್ಕಾರ ಎಂದಿದ್ದ ಪ್ರಧಾನಿಗೆ ಸಿಎಂ ಈ ಬಗ್ಗೆ ದಾಖಲೆ ಬಹಿರಂಗಪಡಿಸಲಿ ಅಂತ ಬಹಿರಂಗವಾಗಿಯೇ ಸವಾಲೆಸಿದ್ದಾರೆ……
.
ಬ್ಯೂರೋ ರಿಪೋರ್ಟ್ ಸುದ್ದಿ ಟಿವಿ….

0

Leave a Reply

Your email address will not be published. Required fields are marked *