ಬಿಜೆಪಿ ವಿರುದ್ಧ ಹರಿಹಾಯ್ದು ಸಿದ್ದರಾಮಯ್ಯ..

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮತ್ತು ಉದ್ಘಾಟನೆ ಸಮಾರಂಭಗಳಲ್ಲಿ ಭಾಗಿಯಾದ್ರು. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ ನಂತ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವ್ರು, ಮೋದಿ ಜೈಲಿಗೆ ಹೋದವರನ್ನು ಮುಂದಿಟ್ಟುಕೊಂಡು ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಗೆಲ್ಲಿಸಿ ಅಂತಿದಾರೆ. ಬಿಜೆಪಿ ಅವರು ಅಕ್ಕಿ ಕೊಟ್ಟಿದ್ದು ನಾವು ಅಂತಾರೆ. ಬಿಜೆಪಿ ಅವ್ರಿಗೆ ನಾಚಿಕೆ ಆಗಬೇಕು ಅಂಥಾ ಕಿಡಿಕಾರಿದ್ರು. ಇದೇ ವೇಳೆ, ಶಾಮನೂರು ಶಿವಶಂಕರಪ್ಪ ಹುಟ್ಟು ಕಾಂಗ್ರೆಸ್ಸಿಗ. ಅವರು ಕಾಂಗ್ರೆಸ್ ಬಿಡೋ ಪ್ರಶ್ನೇನೆ ಇಲ್ಲ ಅಂದ್ರು.

ದಾವಣಗೆರೆ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ, ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರದಲ್ಲಿ ಒಡಕಿಲ್ಲ. ಈ ವಿಚಾರದಲ್ಲಿ ಸಂಪುಟದಲ್ಲಿ 2 ಬಣಗಳಿಲ್ಲ, ನಾಳಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ರು.ಇದಕ್ಕೂ ಮುನ್ನ ಹಾವೇರಿ ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು ಮತ್ತು ರಾಣಿಬೆನ್ನೂರು ತಾಲೂಕಿನ ಅಸುಂಡಿ ಕೆರೆ ತುಂಬಿಸೋ ಯೋಜನೆಗೆ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಬಿಜೆಪಿ ವಿರುದ್ಧ ಹರಿಹಾಯ್ದ್ರು. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದ್ರು. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ಕೆಲಸದ ಬಗ್ಗೆ ಚರ್ಚೆಗೆ ಬರಲಿ ಎಂದು ಅವ್ರು ಸವಾಲು ಹಾಕಿದ್ರು. ಬಿಜೆಪಿ ನಡೆ ದಲಿತರ ಕಡೆಗೆ ಎಂಬುದು ಶುದ್ಧ ನಾಟಕ ಎಂದು ವಾಗ್ದಾಳಿ ನಡೆಸಿದ್ರು. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸೋದ್ರ ಜೊತೆಗೆ, ಬಿಜೆಪಿಯ ಇತಿಮಿತಿಗಳನ್ನು ಕುರಿತು ಪ್ರಸ್ತಾಪಿಸೋದ್ರ ಮೂಲಕ, ತರಾಟೆಗೆ ತೆಗೆದುಕೊಂಡ್ರು.

ಬ್ಯೂರೋ ರಿಪೋರ್ಟ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *