ಬಿಜೆಪಿ ನಾಯಕರ ವಿರುಧ್ಧ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

ಏಲಕ್ಕಿ ನಾಡಿನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ರು. ಬಿಜೆಪಿ ನಾಯಕರು ವಿನಾಕಾರಣ ಕಾನೂನು ಸುವ್ಯವಸ್ಥೆ ಗದಗೆಡಿಸುತ್ತಿದ್ದಾರೆ, ಜನಸಾಮಾನ್ಯರು ನೆಮ್ಮದಿಯನ್ನು ಹಾಳುಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರು ವಿನಾಕಾರಣ ಜಯಂತಿಗಳ ಹೆಸರಲ್ಲಿ ಕಾನೂನು ಸುವ್ಯವಸ್ಥೆ ಹಾಳುಮಾಡುವ ಹೀನ ಕೆಲಸಕ್ಕೆ ಇಳಿದಿದ್ದಾರೆ. ಇದಕ್ಕೆ ಬಿಜೆಪಿ ಕೇಂದ್ರ ನಾಯಕರ ಕುಮ್ಮಕ್ಕಿದೆ ಎಂದು ಹಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇದೆಲ್ಲಾ ಚುನಾವಣೆ ಗಿಮಿಕ್ , ಹುಣಸೂರಿನಲ್ಲಿ ಪ್ರತಾಪ್ ಸಿಂಹ ನಡೆಸಿರುವ ಗಲಾಟೆ ಅಮಿತ್ ಶಾ ಅಣತಿಯಣತೆ ನಡೆದಿದ್ದು, ಯಾವುದೇ ಕಾರಣಕ್ಕು ಜನಸಾಮಾನ್ಯರಿಗೆ ತೊಂದರೆಯಾಗಲು ಬಿಡುವುದಿಲ್ಲಾ. ರಾಜ್ಯ ಸರ್ಕಾರಕ್ಕೆ ಕೆಟ್ಟು ಹೆಸರು ತರಲು ಹುನ್ನಾರ ನಡೆಸಿದ್ದಾರೆ.

ಹಾವೇರಿ ಜಿಲ್ಲೆಗೆ ಬರಪೂರ ಕೊಡೆಗೆ ನೀಡಿದ ಸಿಎಂಗೆ ಹಿರೇಕೆರೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಳ್ಳಿ ಗದೆಕೊಟ್ಟು ಗೌರವಿಸಿದ್ರು. ಹಸಿದ ಹೊಟ್ಟೆಗೆ ಅನ್ನ ನೀಡಿದವರು, ಬರಡು ಭೂಮಿಗೆ ನೀರುಣಿಸಿದವರು ನೀವೆ ನಮ್ಮ ನೆಚ್ಚಿನ ನಾಯಕರು ನಮ್ಮ ತಾಲೂಕಿನಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಮಾಜಿ ಶಾಸಕ ಬಿಸಿ ಪಾಟೀಲ್ ಆಹ್ವಾನವನ್ನು ಇಟ್ಟರು. ನಂತರ ಮಾತನಾಡಿದ ಸಿಎಂ. ಬಿಜೆಪಿ ನಾಯಕರ 150 ಮಶನ್ ಕುಗ್ಗಿ 50ಗೆ ಬಂದು ನಿಂತಿದೆ ಹೀಗಾಗಿಯೇ ಅವರು. ಹತಾಶೆರಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಎಂದ್ರು. ಒಟ್ಟಾರೆ ಏಲಕ್ಕಿ ನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ನಾಯಕರು ಏಷ್ಠೇ ಪಿತೂರಿ ಮಾಡಿದ್ರು ಮೊತ್ತೊಮ್ಮೆ ರಾಜ್ಯದ ಚುಕ್ಕಾಣೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವೇ ಹಿಡಿಯುವುದು ಎನ್ನುವುದನ್ನು ಸಾಭೀತು ಪಡಿಸುವಂತಿತ್ತು.
ಅಣ್ಣಪ್ಪ ಬಾರ್ಕಿ ಸುದ್ದಿಟಿವಿ ಹಾವೇರಿ

0

Leave a Reply

Your email address will not be published. Required fields are marked *