ಯಡಿಯೂರಪ್ಪರದ್ದು ಬಾಲಿಶತನದ ಹೇಳಿಕೆ ಎಂದ ಸಿಎಂ

ರಾಹುಲ್ ಗಾಂಧಿ ಪ್ರಧಾನಿ ಕನಸು ತಿರುಕನ ಕನಸು ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮುಖ್ಯಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಬಾಲಿಶತನದ ಹೇಳಿಕೆ ನೀಡಿದ್ದಾರೆ.. ರಾಜೀವ್ ಗಾಂಧಿ ಎಷ್ಟು ವಯಸ್ಸಿಗೆ ಪಿಎಂ ಆದರು. ರಾಹುಲ್ ಗಾಂಧಿ ಪ್ರಧಾನಿ ಆಗಲ್ಲ ಅಂತ ಹೇಗೆ ಹೇಳ್ತಾರೆ ಅಂಥಾ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಹಗರಣ ಬಿಡುಗಡೆ ಮಾಡುತ್ತೀವಿ ಅಂತಾರೆ. ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ದಿನೇಶ್ ಗುಂಡೂರಾವ್, ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನ ನಾವು ಕಾಯುತ್ತಿದ್ದೀವಿ. ಯಡಿಯೂರಪ್ಪ ಸಿಎಂ ಆಗೋ ಕನಸು ಕಂಡಿದ್ದಾರೆ. ಬಿಎಸ್​ವೈ ಅವರಿಗೂ ಶಭ ಕೋರುವೆ ಎಂದಿದ್ದಾರೆ..

0

Leave a Reply

Your email address will not be published. Required fields are marked *