ಮಂಗಳೂರು ಚಲೋ ವಿಚಾರ : ಸಿಎಂ ಪ್ರತಿಕ್ರಿಯೆ

ಬಿಜೆಪಿಯಿಂದ ಮಂಗಳೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆ ತಪ್ಪಲ್ಲ, ಆದ್ರೆ ಬೈಕ್​ ಜಾಥಾ ಬೇಡ . ಟ್ರಾಫಿಕ್​ನಿಂದ ಸಾರ್ವಜನಿಕರಿಗೆ ತೊಂದರೆ ಆಗೋದುಬೇಡ ಎಂದ್ರು. ಇದೇ ವೇಳೆ ಮಂಗಳೂರು ಚಲೋ ಬೇಡ, ದೆಹಲಿ ಚಲೋ ಮಾಡಿ. ಮಂಗಳೂರು ಚಲೋನಿಂದ ಸಾಮರಸ್ಯ ಹಾಳು ಮಾಡಬೇಡಿ ಅಂತಾ ಸಿಎಂ ತಿಳಿಸಿದ್ದಾರೆ. ನಾವು ಬಳ್ಳಾರಿಗೆ ನಡಿಗೆ ಮಾಡಿದ್ದೀವಿ, ನೀವು ದೆಹಲಿ ಚಲೋ ಮಾಡಿ ರೈತರ ಸಾಲಾ ಮನ್ನಾ ಮಾಡಿಸಿ. ಯಡಿಯೂರಪ್ಪ ಅವರಂತೆ ನಾವು ಎಂದೂ ಏಕವಚನ , ಕೆಟ್ಟ ಪದ ಬಳಸಲ್ಲ. ಇನ್ನು ಶೋಭಾ ಹಿಂದೂ ಪರ ಅಲ್ಲ, ಸಮಾಜ ಹಾಳು ಮಾಡುವವರ ಪರ ಇದ್ದಾರೆ. ಬಿಜೆಪಿಯವರು ಮಾಡೋದನ್ನೂ ಮಾಡಲಿ. ನಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಅಂತಾ ಸಿಎಂ ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *