ಸೀತಾಪುರದಲ್ಲಿ ರೈತರೊಂದಿಗೆ ಭತ್ತದ ನಾಟಿ ಮಾಡಲಿದ್ದಾರೆ ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆದು ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಖುದ್ದಾಗಿ ಸಿಎಂ ಕುಮಾರಸ್ವಾಮಿ ಅವರೇ ಮುಂದಾಗಿದ್ದಾರೆ. ಇದಕ್ಕಾಗಿ ಇಂದು ಪಾಂಡವಪುರ ಸಮೀಪದ ಸೀತಾಪುರದಲ್ಲಿ ಸಿಎಂ ರೈತರೊಂದಿಗೆ ಭತ್ತದ ನಾಟಿ ಮಾಡಲಿದ್ದಾರೆ. ಈ ಬಾರಿ ರಾಜ್ಯ ಸೇರಿದಂತೆ ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ಉತ್ತಮ ಮಳೆಯಾಗಿದ್ದು, ಈ ಭಾಗದ ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಇಲ್ಲಿಗೆ ಆಗಮಿಸಲಿರು ಸಿಎಂ ರೈತರ ಜೊತೆ ಭತ್ತದ ನಾಟಿ ಮಾಡಲು ಮುಂದಾಗಿದ್ದಾರೆ. ನಾಟಿ ಕಾರ್ಯಕ್ಕಾಗಿ ಈಗಾಗಲೇ ಸೀತಾಪುರ ಗ್ರಾಮದ ಲೋಕೇಶ್ ಮತ್ತು ಹೇಮಾವತಿ‌ ಎಂಬ ರೈತರ 5 ಎಕರೆ ಜಮೀನಿನಲ್ಲಿ‌ ನಾಟಿ ಕಾರ್ಯಕ್ಕಾಗಿ ಜಮೀನು ಹದಗೊಳಸಿ ಸಿದ್ದತೆ ಮಾಡಿಕೊಳ್ಳಲಾಗಿದೆ. ನಾಟಿ ಕಾರ್ಯದಲ್ಲಿ ಸುಮಾರು 150 ರೈತರು ಮತ್ತು ಮಹಿಳೆಯೊಂದರಿಗೆ ಸಿ.ಎಂ‌ ನಾಟಿ ಹಾಕಿ ಚಾಲನೇ ನೀಡಲಿದ್ದಾರೆ. ಇನ್ನು‌ ಸಿ.ಎಂ. ಆಗಮನದ ಹಿನ್ನಲೆಯಲ್ಲಿ ಸೀತಾಪುರ ಗ್ರಾಮದಲ್ಲಿ ಭರದ ಸಿದ್ದತೆಗಳು ನಡೆಯುತ್ತಿವೆ. ಒಂದು ಕಡೆ ರಸ್ತೆಗೆ ಡಾಂಬರೀಕರಣ ಸೇರಿದಂತೆ ಜಮೀನು ಬಳಿ ಶೂಟಿಂಗ್ ಲೊಕೇಶನ್ ನಂತೆ ಸ್ಥಳವನ್ನು ಸಿಂಗರಿಸಲಾಗಿದೆ. 50 ಕ್ಕೂ ಹೆಚ್ಚು ಟೈರ್ ಗಾಡಿಗಳನ್ನು‌ ನಾಟಿ ಕಾರ್ಯಕ್ಕಾಗಿ ಬಣ್ಣ ಬಳಿದು ಸಿಂಗಾರ ಮಾಡಲಾಗಿದೆ.

0

Leave a Reply

Your email address will not be published. Required fields are marked *