ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆಯಂತೆ ಬಾಲ್ಯವಿವಾಹ… !

ಬೇಟಿ ಬಡಾವೋ, ಬೇಟಿ ಬಚಾವೋ ಅಂತೀವಿ.. ಇದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಘೋಷವಾಕ್ಯ ಕೂಡ ಹೌದು.. ಆದ್ರೆ ಬೆಂಗಳೂರು ನಗರದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮಾಡೋದಕ್ಕೆ ಪೋಷಕರು ಏನು ಮಾಡ್ತಿದ್ದಾರೆ ಗೊತ್ತಾ…? ಈ ಸ್ಫೋಟಕ ಮಾಹಿತಿ ಕೇಳಿದ್ರೆ ನಾಗರಿಕ ಪ್ರಪಂಚವೇ ತಲೆ ತಗ್ಗಿಸಬೇಕು.. ಬ್ಯುಸಿನೆಸ್‌ನಲ್ಲಿ ಟಾಪ್ ಸಿಟಿ… ಐಟಿ ಹಬ್, ಮಾಡರ್ನ್ ಸಿಟಿ ಅಂತೆಲ್ಲ ಬಿರುದು ಪಡೆದಿರುವ ಬೆಂಗಳೂರಿನ ಈ ಸುದ್ದಿ ಕೇಳಿದ್ರೆ ತಲೆತಗ್ಗಿಸಲೇ ಬೇಕಾಗುತ್ತೆ… ಗ್ರಾಮೀಣ ಭಾಗ ಬಿಡಿ , ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹದ ಪ್ರಕರಣ ಹೆಚ್ಚಾಗ್ತಿದೆಯಂತೆ.. ಈ ಸ್ಫೋಟಕ ಮಾಹಿತಿಯನ್ನು ಚೈಲ್ಡ್ ರೈಟ್ಸ್ ಸಂಸ್ಥೆ ಹೊರಹಾಕಿದೆ.. ೧೨ ರಿಂದ ೧೪ ವರ್ಷದೊಳಗಿನ ಮಕ್ಕಳೇ ಕರೆ ಮಾಡಿ ನನಗೆ ಇಷ್ಟ ಇಲ್ಲದೇ ಇದ್ರೂ ಮದುವೆ ಮಾಡ್ತಿದ್ದಾರೆ ಅಂತ ಚೈಲ್ಡ್ ರೈಟ್ಸ್‌ಗೆ ದೂರು ನೀಡ್ತಿದ್ದಾರಂತೆ.

ವಿಚಿತ್ರ ಅಂದ್ರೆ ಬಾಲ್ಯವಿವಾಹಕ್ಕೆ ಮುಖ್ಯ ಕಾರಣ ಕಾಮುಕ ಗಂಡಸರ ಕಾಟವಂತೆ.. ಹೆಣ್ಣು ಮಕ್ಕಳ ರಕ್ಷಣೆ ಮಾಡಲಾಗದೆ ಸಣ್ಣ ವಯಸಿಗೆ ಮದ್ವೆ ಮಾಡಲಾಗುತ್ತಿದೆಯಂತೆ. ಇನ್ನು ಕೆಲವ್ರು ಮನೆಯಲ್ಲಿ ಯಾರಾದ್ರೂ ಸತ್ರೆ ಅದೇ ವರ್ಷಕ್ಕೆ ಮದ್ವೆ ಮಾಡಬೇಕು.. ೧೮ ವರ್ಷದ ನಂತ್ರ ಹುಡುಗ ಸಿಗಲ್ಲ ಅನ್ನೋ ಕಾರಣಕ್ಕೆ ಬಾಲ್ಯವಿವಾಹ ನಡೆಸುತ್ತಿದ್ದಾರಂತೆ. ಈ ರೀತಿ ಮೂಢನಂಬಿಕೆಯಿಂದಲೂ ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗ್ತಿದೆ. ಪ್ರತೀ ಮದ್ವೆ ಸೀಸನ್​ನಲ್ಲಿ ಇಪ್ಪತ್ತು ಪ್ರಕರಣಗಳು ದಾಖಲಾಗುತ್ತಿವೆಯಂತೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಂಗಳೂರು ಸಿಟಿಯೊಂದರಲ್ಲಿ ವರ್ಷಕ್ಕೆ ಬರೋಬ್ಬರಿ ನಲವತ್ತೈದಕ್ಕಿಂತಲೂ ಹೆಚ್ಚು ಬಾಲ್ಯವಿವಾಹ ನಡೆದಿದ್ಯಯಂತೆ. ದುರಂತ ಅಂದ್ರೆ ಬಾಲ್ಯವಿವಾಹವನ್ನು ಬಹುತೇಕ ನಿಲ್ಲಿಸಲು ಸಾಧ್ಯವಾಗೋದಿಲ್ಲ, ಮುಖ್ಯವಾಗಿ ಮದ್ವೆ ನಡೆಯುವ ಒಂದು ಗಂಟೆ ಮುಂಚಿತ ಮಾಹಿತಿ ಸಿಗುತ್ತೆ. ಇನ್ನು ಕೆಲವು ಪ್ರಕರಣದಲ್ಲಿ ಮದ್ವೆ ನಿಲ್ಲಿಸಲು ಹೋದ್ರೆ ಪ್ರಾಣಭಯವನ್ನು ಎದುರಿಸಬೇಕಾಗುತ್ತೆ ಅನ್ನೋ ಆತಂಕವನ್ನು ಚೈಲ್ಡ್ ರೈಟ್ಸ್ ಸಂಸ್ಥೆ ಹೊರಹಾಕಿದೆ. ಇನ್ನು ಈ ಕುರಿತು ಕ್ರಮ ತೆಗೆದುಕೊಳ್ಳುವ ಭರವಸೆ ನೀಡ್ತಿದ್ದಾರೆ ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ.

ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿರುವಾಗಲೇ ಮಕ್ಕಳ ಬಾಲ್ಯ ಕಸಿಯುತ್ತಿರುವ ಕ್ರೂರತೆ ಬಗ್ಗೆ ಮಾಹಿತಿ ಸಿಕ್ಕಿತೆ.. ನಿಜಕ್ಕೂ ಬಾಲ್ಯವಿವಾಹ ಬೆಂಗಳೂರಲ್ಲಿ ನಡೆಯುತ್ತಿದೆ ಅನ್ನೋದು ಅರಗಿಸಿಕೊಳ್ಳಲಾಗದ ಸತ್ಯ. ಕೂಡಲೆ ಇದಕ್ಕೆ ಕಡಿವಾಣ ಹಾಕಬೇಕು ಅನ್ನೋದು ಚೈಲ್ಡ್ ರೈಟ್ಸ್ ಸಂಸ್ಥೆಯ ಆಗ್ರಹ..!!!

ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *