‘ಹಕ್ಕಿ ಜ್ವರ’ದ ಎಫೆಕ್ಟ್​​..!

ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಹಕ್ಕಿ ಜ್ವರ ಜನ್ರಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಆದ್ರೆ ಚಿಕನ್​ ಸವಿಯುತ್ತಿದ್ದ ಜನರು ಈ ಫುಡ್​ನಿಂದ ದೂರವಿರುವುದ್ರಿಂದ ಕೋಳಿ ವ್ಯಾಪಾರಿಗಳ ಮೇಲೆ ಪ್ರಭಾವ ಬೀರಿದೆ…ಹಲವು ದಿನಗಳಿಂದ ನಗರದ ಜನತೆಯ ನಿದ್ದೆಗೆಡಿಸಿದ್ದ ಹಕ್ಕಿ ಜ್ವರಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ರು, ಜನರಲ್ಲಿ ಭಯ ಮಾತ್ರ ಮಾಯವಾಗಿಲ್ಲ. ಅಲ್ಲದೇ ಕೋಳಿಗಳಿಗೆ ಹಕ್ಕಿ ಜ್ವರ ತಗುಲಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಜನಸಾಮಾನ್ಯರು ಚಿಕನ್ ಫುಡ್​ಗಳನ್ನ ತಿನ್ನುವುದಕ್ಕೆ ಹಿಂದೇಟು ಹಾಕುತ್ತಿರುವುದ್ರಿಂದ ಕುಕ್ಕುಟೋದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ.

ಅಂದಹಾಗೇ ನಗರದಲ್ಲಿ ನಿತ್ಯ ಗ್ರಾಹಕರಿಂದ ಬಣಗುಡುತ್ತಿದ್ದ ಚಿಕನ್​ ಸ್ಟಾಲ್​ಗಳು ಜನರಿಲ್ಲದೇ ಬಿಕೋ ಎನ್ನಲು ಶುರುವಾಗಿವೆ. ಅಲ್ಲದೇ ಹಕ್ಕಿ ಜ್ವರದ ಎಫೆಕ್ಟ್​​ನಿಂದಾಗಿ ನೂರರ ಗಡಿ ದಾಟಿದ್ದ ಚಿಕನ್​ ಬೆಲೆ, 80ರ ಆಸುಪಾಸಿಗೆ ಬಂದಿದ್ರು, ಜನ ಮಾತ್ರ ಚಿಕನ್ ಖರೀದಿಸುಕೋ ಒಲ್ಲೆ ಅಂತಿದ್ದಾರೆ ಹೀಗಾಗಿ ಚಿಕನ್​ ವ್ಯಾಪಾರ ಫುಲ್​ ಡಲ್​ ಆಗಿದೆ.ಇನ್ನು ಕುಕ್ಕುಟೋದ್ಯಮದ ಮಾಹಿತಿ ಪ್ರಕಾರ ಹಕ್ಕಿಜ್ವರ ಪತ್ತೆಯಾದ ಎರಡು ದಿನಗಳಲ್ಲಿ ಶೇಖಡಾ 20 ರಷ್ಟು ವ್ಯಾಪಾರ ಕುಸಿದಿತ್ತು. ಅಲ್ಲದೇ ಬೆಲೆ ಕೂಡ ದಿಢೀರ್​ ಎನ್ನುವಂತೆ 20 ರಿಂದ 25 ರೂಪಾಯಿ ಇಳಿಕೆಯಾಗಿತ್ತು. ಸದ್ಯ ವ್ಯಾಪಾರ ಕೊಂಚ ಮಟ್ಟಿಗೆ ಸುಧಾರಿಸಿಕೊಳ್ತಿದ್ದು, ಬೆಲೆ ಕೂಡ ನಿಧಾನವಾಗಿ ಮೊದಲ ಹಂತಕ್ಕೆ ಬರ್ತಿದೆಯಂತೆ.ಒಟ್ನಲ್ಲಿ ಹಕ್ಕಿ ಜ್ವರಕ್ಕೆ ಬಿಬಿಎಂಪಿ ಸಕಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದ್ರ ನಡುವೆ ನಗರದಲ್ಲಿನ ಜನರು ಚಿಕನ್ ಖರೀದಿ ಮಾಡದೆ ಇರುವುದ್ರಿಂದ ಕುಕ್ಕೊಟೋದ್ಯಮಕ್ಕೆ ಬಿಸಿ ತಟ್ಟಿದ್ದು, ವ್ಯಾಪಾರಸ್ಥರ ನಿದ್ದೆಗೆಡಿಸಿದೆ…
=======
ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *