ಚೆನ್ನೈಗೆ ಕೈ ಬಿಡದ ಅಭಿಮಾನಿಗಳ ಹರಕೆ..

ವರ್ಕ್​ ಔಟ್​ ಆಗಿದೆ ಧೋನಿ ಲಕ್ಕಿ ಆಟ.. ಎಸ್​​.. ಮಹೇಂದ್ರ ಸಿಂಗ್​ ಧೋನಿ ನಿನ್ನೆ ಐಪಿಎಲ್​ ಟ್ರೋಫಿ ಗೆಲ್ಲುವಲ್ಲಿ ಅಂಕಿ ಅಂಶಗಳ ಆಟ ಸಹ ಎದ್ದು ಕಾಣುತ್ತದೆ. ಈ ಬಗ್ಗೆ ಧೋನಿ ಸಹ ಸಂತಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಮೂರು ಐಪಿಎಲ್​​ಗಳಲ್ಲಿ ಈ ಗೆಲುವಿಗೆ ವಿಶೇಷ ಸ್ಥಾನವನ್ನು ನೀಡಿದ್ದಾರೆ.ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆದ ಐಪಿಎಲ್​​ ಫೈನಲ್​ ದಂಗಲ್​ ಫೈಟ್​ ರೋಚಕತೆ ಹುಟ್ಟಿಸಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳು ಕಾದಾಟ ನಡೆಸಿದವು. ಪ್ರಶಸ್ತಿ ಸುತ್ತಿನ ಕದಾಟದಲ್ಲಿ ಚೆನ್ನೈ ಬೊಂಬಾಟ ಆಟ ಆಡಿ ಎಲ್ಲರೂ ಹುಬ್ಬು ಏರಿಸುವಂತೆ ಮಾಡಿದ್ದಾರೆ. ಯಂಗ್​ ಪ್ಲೇಯರ್ಸ್​ ಗೇಮ್​ ಎಂದೇ ಕರಿಸಿಕೊಳ್ಳುವ ಐಪಿಎಲ್​​ನಲ್ಲಿ, ಅನುಭವಿಗಳು ಸಹ ಮಿಂಚಬಲ್ಲರು ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತೋರಿಸಿದೆ.

ಅಂದಹಾಗೆ ಚೆನ್ನೈ ತಂಡ ಫೈನಲ್​ಗೆ ತಲುಪಿದಾಗಲೇ ಅಂಕಿ ಅಂಶಗಳ ಲೆಕ್ಕಾಚಾರ ಆರಂಭವಾಗಿತ್ತು. ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಫಾರ್ಮ್​​​ನಲ್ಲಿದ್ದ ಧೋನಿ ಮೂರನೇ ಬಾರಿಗೆ ಕಪ್​​ಗೆ ಮುತ್ತಿಡುವ ಬಗ್ಗೆ ಅಭಿಮಾನಿಗಳು ಲೆಕ್ಕಾಚಾರ ಹಾಕಿಕೊಂಡಿದ್ರು. ಈ ಗಣಿತ ಈಗ ನಿಜವಾಗಿದೆ. ಅಂದಹಾಗೆ ಚುಟುಕು ಕ್ರಿಕೆಟ್​​ನಲ್ಲಿ ಧೋನಿ ಸಂಚಲನ ಮೂಡಿಸಿದ ಆಟಗಾರ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್​​ನಲ್ಲಿ ಭಾರತ ಗೆಲ್ಲಲು ಪ್ರಮುಖ ಕಾರಣ ಧೋನಿ. ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಧೋನಿ, ತಂಡಕ್ಕೆ ಚುಟುಕು ವಿಶ್ವಕಪ್​ ಕಿರೀಟ ತೋಡಿಸಿದ್ದರು.

ಈ ಬಾರಿ ಅಭಿಮಾನಿಗಳು ಚೆನ್ನೈ ತಂಡ ಕಪ್​ಗೆ ಮುತ್ತಿಡೋದರ ಬಗ್ಗೆ ಲೆಕ್ಕಾಚಾರವನ್ನು ಹಾಕಿಕೊಂಡಿದ್ರು. ಅಂಕಿ ಅಂಶಗಳು ಸಹ ಇದಕ್ಕೆಲ್ಲಾ ಪುಷ್ಠಿ ನೀಡಿದ್ದವು. ಹೌದು.. ಧೋನಿಗೆ 7 (ಸೆವನ್​​) ಲಕ್ಕಿ ನಂಬರ್​ ಎನ್ನೋದು ಎಲ್ಲರಿಗೂ ಗೊತ್ತೆ ಇದೆ. ಧೋನಿ ಜುಲೈ 7ರ 1981ರಲ್ಲಿ ಹುಟ್ಟಿದ್ದಾರೆ. ಹೀಗಾಗಿ ಅವರು ತಮ್ಮ ಜೆರ್ಸಿ ಮೇಲೆ 7 (ಸೆವನ್​​) ತೊಟ್ಟು ಕೊಳ್ಳುತ್ತಾರೆ. ಅಲ್ಲದೆ ಈ ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಏಳನೇ ಬಾರಿಗೆ ಐಪಿಎಲ್​​ನ ಫೈನಲ್​​ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸಿತ್ತು. ಇನ್ನು 7ನೇ ಪ್ರಯತ್ನದಲ್ಲಿ ಮೂರನೇ ಬಾರಿ ಕಪ್​ಗೆ ಮುತ್ತಿಟ್ಟಿರುವ ಕೂಲ್​ ಕ್ಯಾಪ್ಟನ್​ ಸಹ ಈ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಒಂದೇ ತಂಡ ಮೂರು ಬಾರಿ ಕಪ್​ಗೆ ಮುತ್ತಿಟ್ಟಿದ್ದು ಇದೇ ಎರಡನೇ ಬಾರಿ. ಈ ಮೊದಲು ಕಳೆದ ಬಾರಿ ಮುಂಬೈ ಇಂಡಿಯನ್ಸ್​ ಸಹ ಮೂರು ಬಾರಿ ಕಪ್​ ಎತ್ತಿ ಸಂಭ್ರಮಿಸಿತ್ತು. 2018ರಲ್ಲಿ ಧೋನಿ ಸೈನ್ಯ ಮುಂಬೈ ದಾಖಲೆಯನ್ನು ಸರಿಗಟ್ಟಿದೆ. ರಾಂಚಿಯ ಈ ಧೋನಿ, ಭಾರತದಲ್ಲಿ ಉತ್ತರದಿಂದ ದಕ್ಷಿಣದುದ್ದಕ್ಕೂ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಂಚಿಯಲ್ಲಿ ವಾಸಿಸುವ ಮಾಹಿ, ಚೆನ್ನೈ ತಂಡವನ್ನು ಮುನ್ನಡೆಸಿ, ತಮಿಳುನಾಡಿನ ಅಭಿಮಾನಿಗಳ ನೆಚ್ಚಿನ ತಲೈವಾ ಎನಿಸಿಕೊಂಡಿದ್ದಾರೆ. 2019ರ ವಿಶ್ವಕಪ್​ ಮೇಲೆ ಕಣ್ಣು ನೆಟ್ಟಿರುವ ಮಾಹಿ ತನ್ನಲ್ಲಿ ಇನ್ನೂ ಸಾಮರ್ಥ್ಯ ಇರೋದಾಗಿ ಸಾರಿ ಹೇಳಿದ್ದಾರೆ.

ಸ್ಪೋರ್ಟ್ಸ್​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *