ಚಂದ್ರಶೇಖರ್ ರಾವ್ ಕಾಂಗ್ರೆಸ್ ಶಿಷ್ಯ: ಪ್ರಧಾನಿ ನರೇಂದ್ರ ಮೋದಿ

ಹೈದರಾಬಾದ್: ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರದು ಕಾಂಗ್ರೆಸ್​​ನ ಶಿಷ್ಯವೃತ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ತೆಲಂಗಾಣದ ನಿಜಾಮಬಾದ್​ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ತೆಲಂಗಾಣವನ್ನು ಹಾಳುಗೆಡುವುದನ್ನು ಅವರು ಕಾಂಗ್ರೆಸ್​ನಿಂದ ಕಲಿತಿದ್ದಾರೆ. ಹಾಳುಗೆಡುವವ ವಿಷಯದಲ್ಲಿ ಅವರು ಪಿಎಚ್​​ಡಿ ಮಾಡಿದಲ್ಲಿ, ಈಗ ಹಾಳುಗೆಡವಿರುವ 100ಕ್ಕೂ ಪಟ್ಟು ಹಾಳುಗೆಡವುತ್ತಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಮತ್ತು ಟಿಆರ್​ಎಸ್​​ ಪಕ್ಷಗಳು ಸಾಮ್ರಾಜ್ಯಶಾಹಿ ರಾಜಕಾರಣದಲ್ಲಿ ನಂಬಿಕೆ ಇಟ್ಟಿವೆ. ಅವರೆಡೂ ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಪಕ್ಷಗಳು ವೋಟ್​ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತವೆ. ಇವರಲ್ಲಿ ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

0

Leave a Reply

Your email address will not be published. Required fields are marked *