ಕೇಂದ್ರ ಸರ್ಕಾರದಿಂದ ಹೋಟೆಲ್​​​ ಗ್ರಾಹಕರಿಗೆ ಸಿಹಿ ಸುದ್ದಿ

ಜಿಎಸ್​ಟಿಯಿಂದಾಗಿ ಹೋಟೆಲ್​​ ಊಟದ ದರ ಜಾಸ್ತಿಯಾಯ್ತು ಅಂತ ಬೇಸರದಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಇನ್ಮುಂದೆ ಹೋಟೆಲ್​​ನಲ್ಲಿ ನೀವು ಊಟ ಮಾಡೋದಿಕ್ಕೆ ಟೆಂನ್ಶನ್​​ ಆಗ್ಬೇಕಾಗಿಲ್ಲ. ಯಾಕಂದ್ರೆ ನವೆಂಬರ್​​ 15 ರಿಂದ ಬೆಂಗಳೂರು ನಗರಾದ್ಯಂತ ಹೋಟೆಲ್​ ಊಟದ ದರ ಕಡಿಮೆಯಾಗ್ತಿದೆ.

ಹೌದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಎಸ್​ಟಿಯಿಂದಾಗಿ ಹಲವು ಉತ್ಪನ್ನಗಳ ದರ ಗಗನಕ್ಕೇರಿತ್ತು. ಅದರಲ್ಲಿಯೂ ಹೋಟೆಲ್​ ಊಟದ ದರವಂತೂ ಗ್ರಾಹಕರ ನಿದ್ದೆಗೆಡಿಸಿತ್ತು. ಜೊತೆಗೆ ಹೋಟೆಲ್​ ವಹಿವಾಟು ಕೂಡ ನೆಲಕಚ್ಚಿತ್ತು. ಪ್ರಮುಖವಾಗಿ ಎಸಿ ಹೋಟೆಲ್​ಗಳಿಗೆ ಶೇಖಡಾ 18 ರಷ್ಟು ಮತ್ತು ನಾನ್​ ಎಸಿ ಹೋಟೆಲ್​ಗಳಿಗೆ ಶೇಖಡಾ 12 ರಷ್ಟು ತೆರಿಗೆ ವಿಧಿಸಲಾಗಿತ್ತು. ಇದರಿಂದ ಹೋಟೆಲ್​ ಅಸೋಸಿಯೇಷನ್​​ ಬೀದಿಗಿಳಿದು ಪ್ರತಿಭಟಿಸಿತ್ತು.

ಕೊನೆಗೂ ಎಚ್ಚೆತ್ತುಕೊಂಡ ಕೆಂದ್ರ ಸರ್ಕಾರ ತೆರಿಗೆ ದರವನ್ನು ಕಡಿತಗೊಳಿಸಿದೆ. ಎಲ್ಲ ಹೋಟೆಲ್​ಗಳಿಗೂ ಶೇಕಡಾ 5ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ ಸಂತಸಗೊಂಡಿರುವ ಬೃಹತ್​ ಬೆಂಗಳೂರು ಹೋಟೆಲ್​ ಅಸೋಸಿಯೇಷನ್​, ಎಲ್ಲ ಹೋಟೆಲ್​ಗಳ ದರ ಇಳಿಸಲು ನಿರ್ಧರಿಸಿದೆ.

ಇನ್ನು ನವೆಂಬರ್​ 15ರಿಂದ ಬೆಂಗಳೂರು ನಗರಾದ್ಯಂತ ಎಲ್ಲ ಹೋಟೆಲ್​ಗಳಲ್ಲೂ ದರ ಇಳಿಕೆಯಾಗಲಿದೆ. ಅಂದ್ರೆ ಈ ಹಿಂದೆ ಒಂದು ಊಟಕ್ಕೆ 100 ರೂಪಾಯಿ ಹಣವಿದ್ರೆ, ತೆರಿಗೆ ಸೇರಿ 118 ರೂಪಾಯಿ ಹಣವನ್ನು ನೀಡ್ಬೇಕಿತ್ತು. ಆದರೆ, ಇನ್ಮುಂದೆ ನೂರು ರೂಪಾಯಿ ಊಟಕ್ಕೆ 105 ರೂಪಾಯಿ ಹಣವನ್ನು ನೀಡಿದರೆ ಸಾಕು. ಇನ್ನು ಜಿಎಸ್​ಟಿ ತೆರಿಗೆ ಕಡಿತದಿಂದಾಗಿ ಗ್ರಾಹಕರಿಗೆ ಸಮಾಧಾನವಾದಂತಾಗಿದೆ. ಇತ್ತ ದರ ಏರಿಕೆಯಿಂದಾಗಿ ಬಹುತೇಕ ಗ್ರಾಹಕರು ಫುಟ್​ ಪಾತ್​ ಹೋಟೆಲ್​ಗಳ ಮೊರೆ ಹೋಗಿದ್ದರು. ಇದರಿಂದ ಹೋಟೆಲ್​ಗಳಲ್ಲಿ ವಹಿವಾಟು ಕುಂಠಿತಗೊಂಡಿತ್ತು. ಇದೀಗ  ಮತ್ತೆ ಹೋಟೆಲ್​ ಮಾಲೀಕರು ವ್ಯಾಪಾರ ಚಿಗುರುವ ಭರವಸೆಯಲ್ಲಿದ್ದಾರೆ.

ಒಟ್ಟಾರೆ ಈ ಹಿಂದೆ ಜಿಎಸ್​ಟಿ ಮೂಲಕ ಕಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಗ್ರಾಹಕರಿಗೆ ಮತ್ತು ಹೋಟೆಲ್​ ಮಾಲಿಕರಿಗೆ ಸಿಹಿ ಸುದ್ದಿ ನೀಡಿದೆ.

ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *