ಕೊಟ್ಟ ಮಾತನ್ನು ಮರೆತ ಕೇಂದ್ರ ಸರ್ಕಾರ…

ಕೇಂದ್ರ ಸರ್ಕಾರ ಗರಿಷ್ಟ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಬರೋಬ್ಬರಿ ಒಂದು ವರ್ಷವಾಯ್ತು. ಆದರೆ, ಇನ್ನೂ ಇದರ ಪರ – ವಿರೋಧ ಚರ್ಚೆ ಮಾತ್ರ ನಿಂತಿಲ್ಲ. ಇದರ ನಡುವೆ ಕೇಂದ್ರ ಸರ್ಕಾರ ಬ್ಯಾಂಕ್​ ಸಿಬ್ಬಂದಿಗಳಿಗೆ ಕೊಟ್ಟ ಭರವಸೆಯನ್ನೇ ಮರೆತಿದೆ. ಹೀಗಾಗಿ ಕೇಂದ್ರದ ವಿರುದ್ಧ ಅಂದು ದಿನದ 24 ಗಂಟೆಯೂ ಶ್ರಮ ವಹಿಸಿ ದುಡಿದಿದ್ದ, ಬ್ಯಾಂಕ್​ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು… ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಒಂದು ವರ್ಷದ ಮೇಲಾಯ್ತು. ಇನ್ನು ನೋಟುಗಳು ರದ್ದುಗೊಂಡ ಸಂದರ್ಭದಲ್ಲಿ ಜನಸಾಮಾನ್ಯರು ಎಷ್ಟು ಪರದಾಡಿದರೋ, ಬ್ಯಾಂಕ್​ ಸಿಬ್ಬಂದಿಗಳು ಕೂಡ ಅಷ್ಟೇ ಸಮಸ್ಯೆಗಳನ್ನು ಎದುರಿಸಿದದ್ದರು. ದಿನದ 24 ಗಂಟೆಯೂ ಬ್ಯಾಂಕ್​ನಲ್ಲಿ ಕೆಲಸ ನಿರ್ವಹಿಸಿದ್ದರು. ಜನಸಾಮಾನ್ಯರ ಹಿಡಿಶಾಪದ ನಡುವೆಯೂ ಉತ್ತಮ ಸೇವೆ ಸಲ್ಲಿಸಿದ್ದರು. ಈ ವೇಳೆ ಕೇಂದ್ರ ಸರ್ಕಾರ ಬ್ಯಾಂಕ್​ ಸಿಬ್ಬಂದಿಗೆ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಪ್ರಮುಖವಾಗಿ ಅಧಿಕ ಅವಧಿಯ ಕೆಲಸಕ್ಕಾಗಿ ಓಟಿ, ವಿಶೇಷ ಸಂಭಾವನೆ ಮತ್ತು ಈ ವೇಳೆ ಬ್ಯಾಂಕ್​ಗಳು ಭರಿಸಿದ ಖರ್ಚು ವೆಚ್ಚಗಳನ್ನು ಭರಿಸುವ ಭರವಸೆ ನೀಡಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಮರೆತು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ.

ಇನ್ನು ಕೇಂದ್ರ ಸರ್ಕಾರ ಕೆಲ ಬ್ಯಾಂಕ್​ ಗಳ ಸಿಬ್ಬಂದಿಗೆ ಮಾತ್ರ ಓಟಿ ಹಣವನ್ನು ನೀಡಿ ಕೈತೊಳೆದುಕೊಂಡಿದೆ. ಅದರ ಹೊರತಾಗಿ ಯಾವುದೇ ಸಿಬ್ಬಂದಿಗಳಿಗೆ ವಿಶೇಷ ಸಂಭಾವನೆ ನೀಡಿಲ್ಲ. ಅಲ್ಲದೇ, ನೋಟ್​ ಬ್ಯಾನ್​​​ ಸಂದರ್ಭದಲ್ಲಿ ಪ್ರತಿ ಬ್ಯಾಂಕ್​ಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚಾಗಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಖರ್ಚು ವೆಚ್ಚಗಳನ್ನು ಬ್ಯಾಂಕ್​​ಗಳು ಭರಿಸಿವೆ. ಈ ವೇಳೆ ಕೇಂದ್ರ ಸರ್ಕಾರ ಎಲ್ಲ ವೆಚ್ಚವನ್ನು ತುಂಬಿಕೊಡುವ ಭರವಸೆಯನ್ನೂ ನೀಡಿತ್ತು.

ಆದರೆ, ನೋಟ್​ ಬ್ಯಾನ್​ ಆಗಿ ವರ್ಷ ಕಳೆದ್ರೂ, ಆ ವೆಚ್ಚವನ್ನು ಬರಿಸಿಲ್ಲ ಎಂದು ಬ್ಯಾಂಕ್​ ಸಿಬ್ಬಂದಿ ಆಕ್ರೋಶ ವ್ತಕ್ತಪಡಿಸ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ಬ್ಯಾಂಕ್​ ಸಿಬ್ಬಂದಿಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸಬೇಕಾಗಿದೆ.

ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *