ವಿರಾಟ್​​ ಮುಡಿಗೆ ಮತ್ತೊಂದು ಪ್ರಶಸ್ತಿ…

ಐಪಿಎಲ್​​ಗೆ ತೆರೆ ಬಿದ್ದಿದೆ. ಬಲಿಷ್ಠ 8 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಈ ಟೂರ್ನಿಯಲ್ಲಿ ಆರ್​ಸಿಬಿ ತಂಡದ ಪರ ವಿರಾಟ್​ ಕೊಹ್ಲಿ, ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಪ್ರಸಕ್ತ ವರ್ಷ ಟೀಮ್​ ಇಂಡಿಯಾದ ಪರ ನಾಯಕನ ಆಟ ಆಡಿದ್ದಾರೆ. ಇವರ ಪ್ರದರ್ಶನದ ಆಧಾರದ ಮೇಲೆ ವಿರಾಟ್​​ಗೆ ಮತ್ತೊಂದು ಪ್ರಶಸ್ತಿಗೆ ವಿರಾಟ್​​ ಭಾಜನರಾಗಿದ್ದಾರೆ.ಟೀಮ್​​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಭರ್ಜರಿ ಫಾರ್ಮ್​​ನಲ್ಲಿರುವ ಆಟಗಾರ. ತಮ್ಮ ಕಲಾತ್ಮಕ ಆಟದ ಫಲವಾಗಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಪ್ಲೇಯರ್​. ಸದ್ಯ ಮುಕ್ತಾಯಗೊಂಡ ಐಪಿಎಲ್​​ನ ಟೂರ್ನಿಯಲ್ಲಿ ರನ್​ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದರಬಹುದು ಆದ್ರೆ, ಸ್ಥಿರವಾಗಿ ರನ್​ ಕಲೆ ಹಾಕಿದ್ದಾರೆ. ಈ ಬಾರಿಯೂ 500ಕ್ಕೂ ಹೆಚ್ಚು ರನ್​ ದಾಖಲಿಸಿದ್ರು.

ಟೆಸ್ಟ್​​ ಪಂದ್ಯವೇ ಆಗಿರಲಿ ಸಿಮೀತ ಓವರ್​​ಗಳ ಪಂದ್ಯವೇ ಆಗಲಿ ವಿರಾಟ್​​, ಬ್ಯಾಟ್​ ಹಿಡಿದು ಮೈದಾನಕ್ಕೆ ಎಂಟ್ರಿ ನೀಡಿದ್ರೆ ರನ್​​ಗಳನ್ನು ಸರಾಗವಾಗಿ ಕಲೆ ಹಾಕಬಲ್ಲ ಆಟಗಾರ. ರನ್​​ ಹಿಂಬಾಲಿಸುವಲ್ಲಿ ಇವರು ತೋರುವ ಧೈರ್ಯಕ್ಕೆ ಮನಸೊತ ಅಭಿಮಾನಿಗಳು, ಚೇಸಿಂಗ್​ ಸ್ಟಾರ್​​ ಎಂದಲೇ ಕರೆದಿದ್ದಾರೆ. ಅದೆಷ್ಟೋ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಅಬ್ಬರದ ಬ್ಯಾಟಿಂಗ್​ ಮೂಲಕವೇ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. 2017ರಲ್ಲಿ ವಿರಾಟ್​​ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಸ್ಥಿರ ಪ್ರದರ್ಶನಕ್ಕೆ ಅದೆಷ್ಟೋ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಈ ಸಾಲಿಗೆ ಮತ್ತೊಂದು ಪ್ರಶಸ್ತಿ ಸೇರ್ಪಡೆಯಾಗಿದೆ. ಸಿಯಟ್​​ ನೀಡುವ ಸರ್ವಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟ್​ ಆಟಗಾರ ಎಂಬ ಹೆಗ್ಗಳಿಕೆ, 29 ವರ್ಷದ ವಿರಾಟ್​​ ಪಾಲಾಗಿದೆ. ವಿರಾಟ್​ ಈ ಪ್ರಶಸ್ತಿಯನ್ನು ಮೂರನೇ ಬಾರಿ ಸ್ವೀಕರಿಸುತ್ತಿರುವುದು ವಿಶೇಷ.

ಇನ್ನು ಟೀಮ್​ ಇಂಡಿಯಾದ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಆರಂಭಿಕ ಶಿಖರ್​ ಧವನ್​, ಮೈದಾನದಲ್ಲಿ ಸಿಕ್ಸರ್​ ಬಾರಿಸುತ್ತಾ ತಮ್ಮ ಖದರ್​ ಮುಂದುವರೆಸಿದ್ದಾರೆ. ಇವರಿಗೆ ವರ್ಷದ ಉತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ಇನ್ನು ನ್ಯೂಜಿಲೆಂಡ್​ ತಂಡದ ವೇಗದ ಬೌಲರ್​​ ಟ್ರೆಂಟ್​ ಬೌಲ್ಟ್​​ಗೆ ಬೆಸ್ಟ್​ ಬೌಲರ್​​ ಗೌರವಕ್ಕೆ ಪಾತ್ರರಾಗಿದ್ದಾರೆ. ಆಫ್ಘಾನ್​​ ತಂಡದ ಖ್ಯಾತ ಸ್ಪಿನ್​ ಬೌಲರ್​ ರಶೀದ್​ ಖಾನ್​​ಗೂ ಪ್ರಶಸ್ತಿ ಲಭಿಸಿದೆ. ರಶೀದ್​ ಚುಟುಕು ಕ್ರಿಕೆಟ್​​ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಇವರಿಗೆ, ಸರ್ವಶ್ರೇಷ್ಠ ಬೌಲರ್​ ಎಂಬ ಪ್ರಶಸ್ತಿ ನೀಡಲಾಗಿದೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ
————————

0

Leave a Reply

Your email address will not be published. Required fields are marked *