ದಿಗ್ವಿಜಯ್ ಸಿಂಗ್ ವಿರುದ್ಧ ದೂರು ದಾಖಲು

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಐಸಿಸ್ ಕುರಿತು ಟ್ವೀಟ್ ಮಾಡಿದ ವಿಷಯಕ್ಕೆ ಸಂಬಧಿಸಿದಂತೆ ತೆಲಂಗಾಣ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ನನ್ನ ವಿರುದ್ಧ ದೂರು ದಾಖಲಿಸಿರುವ ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳು. ಈ ಅವಕಾಶವನ್ನು ನನ್ನಲ್ಲಿರುವ ವಿಚಾರಗಳನ್ನು ಹೇಳಲು ಬಳಸಿಕೊಳ್ಳುತ್ತೇನೆ. ಸಿಎಂ, ಗೃಹ ಸಚಿವ, ಡಿಜಿಪಿ, ಕೇಂದ್ರ ಗೃಹ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಪಡೆಗಳು ಇದನ್ನು ನಿಗ್ರಹಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಅವರ ವಿರುದ್ಧ ಪಾಟಿ ಸವಾಲು ಒಡ್ಡುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತೆಲಂಗಾಣ ಪೊಲೀಸರ ವಿರುದ್ಧ ಟ್ವೀಟ್ ಮಾಡಿದ್ದ ದಿಗ್ವಿಜಯ್ ಸಿಂಗ್, ನಕಲಿ ಐಸಿಸ್ ಜಾಲತಾಣಗಳ ಕುರಿತು ಪ್ರಚಾರ ಮಾಡುವ ಮೂಲಕ ಮುಸ್ಲಿಂ ಯುವಕರನ್ನು ಐಸಿಸ್​​ ಸೇರಲು ಪ್ರಚೋದನೆ ನೀಡಲಾಗುತ್ತಿದೆ ಎಂದಿದ್ದರು. ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ಈ ವಿಷಯದಲ್ಲಿ ಪಾಲುದಾರರು. ಆದ್ದರಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.

0

Leave a Reply

Your email address will not be published. Required fields are marked *