ಭಾರತೀಯ ಕಾರ್ಟೂನ್​ ಗ್ಯಾಲರಿಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ

 ಬೆಂಗಳೂರು: ಪಕ್ಷಿಗಳಿಗೆ ಮರಗಳಿಲ್ಲ, ಶಾಂತಿ ಸಂದೇಶ ಸಾರೋ ಪಾರಿವಾಳಗಳಿಗೆ ರೆಕ್ಕೆ ಕತ್ತರಿಸಲಾಗಿದೆ. ಜನರ ಮಾತಿಗೆ ಬೆಲೆಯಿಲ್ಲದ ರೆಡ್​ ಕಾರ್ಪೆಟ್​ ಸಂಸ್ಕೃತಿ ತಾಂಡವವಾಡ್ತಿದೆ. ಹೀಗೆ ಒಂದೊಂದು ವ್ಯಂಗ್ಯ ಚಿತ್ರಗಳು ಸಮಾಜದಲ್ಲಿನ ಆಗೋಹೋಗುಗಳಿಗೆ ಚಾಟಿ ಬೀಸಿ, ಸದ್ದಿಲ್ಲದೆ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಿ, ಜನರನ್ನ ಚಿಂತನೆಗೆ ಹಚ್ಚಿವೆ. ಈ ವ್ಯಂಗ್ಯ ಚಿತ್ರಗಳನ್ನ ಭಾರತೀಯ ಕಾರ್ಟೂನ್​ ಗ್ಯಾಲರಿಯಲ್ಲಿ ಏರ್ಪಡಿಸಿದ್ದು, ಪ್ರದರ್ಶನ ನಡೆಯಲಿದೆ.

ಚೀನಾದ ವ್ಯಂಗ್ಯಚಿತ್ರಕಾರನ 50 ಕಲಾಕೃತಿಗಳನ್ನ ಇಲ್ಲಿ ಪ್ರದರ್ಶಿಸಲಾಗಿದೆ. ಇಡೀ ವಿಶ್ವದ ಮನುಕುಲ ಎದುರಿಸುತ್ತಿರೋ ಸವಾಲುಗಳತ್ತ ವ್ಯಂಗ್ಯಚಿತ್ರಗಳು ದೃಷ್ಟಿಬೀರಿವೆ. ಶ್ರೀ ಸಾಮಾನ್ಯನ ತೊಳಲಾಟ, ಪರಿಸರದ ನಾಶ, ರಾಜಕೀಯ ಪ್ರಜ್ಞೆಗೂ ಇವು ಸಾಕ್ಷಿಯಾಗಿವೆ. ಕ್ಲಿಪ್​ ಒಂದರ ಮೂಲಕ ಕಲಾವಿದ ಅದರಲ್ಲಿ ಎರಡು ಭಾಗಗಳಿದ್ದು, ಒಂದು ಭಾಗ ತೆಗೆದರೆ ಇಡೀ ಕ್ಲಿಪ್​ ವೇಸ್ಟ್​ ಹಾಗೆ. ಗಂಡ-ಹೆಂಡತಿಯೂ ಬೇಧಗಳ ನಡುವೆ ಹೊಂದಿಕೊಂಡು ಹೋಗಬೇಕೆನ್ನುತ್ತದೆ.

ಇನ್ನು ಪುಸ್ತಕವೊಂದನ್ನ ಹೊಕ್ಕಿ ಬರುವ ಹುಡುಗ ದೊಡ್ಡ ವ್ಯಕ್ತಿಯಾಗಿ ಮಾರ್ಪಾಡಾಗ್ತಾನೆ. ಒಂದು ಬದುಕಿನ ಗತಿ ಬದಲಿಸ್ತದೆ ಅನ್ನೋ ಸಾರ್ವಕಾಲಿಕ ಸತ್ಯವನ್ನ ಓರೆ ಹಚ್ಚಿದ್ದಾರೆ. ಜಗತ್ತಿನ ಹಸಿವನ್ನ ಕುರಿತು ವಿಶ್ವಸಂಸ್ಥೆಯ ಚಿನ್ಹೆಯ ಅಡಿ ಹುಡುಗನೊಬ್ಬ ಅದರ ಗರಿಯನ್ನೇ ಇರಿದು ತಿನ್ನುವ ಚಿತ್ರಣ ವಾಸ್ತವಿಕತೆ ಹೇಳ್ತಿದೆ. ಇನ್ನು ವ್ಯಕ್ತಿಯ ಬೆರಳಲ್ಲಿ ಬೆಂಕಿ, ಬಾಂಬ್​ ಎರಡೂ ಇದೆ. ಉಪಯೋಗಿಸುವುದರ ಮೇಲೆ ಪರಿಣಾಮ ನಿಂತಿದೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ.

ಜಗತ್ತಿನಲ್ಲಿ ನಾವು ನಡೆದಿದ್ದೇ ಹಾದಿ ಅಂತ ಹೊರಟ್ರೇ ವಿನಾಶ ತಪ್ಪಿದ್ದಲ್ಲ. ಅದನ್ನ ಭರಿಸೋರು ಬೇರೆ ಯಾರೂ ಅಲ್ಲ, ನಾವೇ. ಆಗಿರೋ ಅನಾಹುತಗಳಿಂದ ಎಚ್ಚೆತ್ತುಕೊಳ್ಳಿ ಅಂತಿವೆ ಈ ಯುವ ಕಲಾವಿದನ ವ್ಯಂಗ್ಯ ಚಿತ್ರಗಳು. ಚೀನಾದೇಶದ ಯುವ ವ್ಯಂಗ್ಯಚಿತ್ರಕಾರ ಲಿಯೋ ಕಿಯಾಂಗ್​ರ ವ್ಯಂಗ್ಯಚಿತ್ರ ಪ್ರದರ್ಶನವನ್ನ ಭಾರತೀಯ ಕಾರ್ಟೂನ್​ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದ್ದು. ಪ್ರದರ್ಶನ ಜನವರಿ 20ರವರೆಗೆ ನಡೆಯಲಿದೆ.

0

Leave a Reply

Your email address will not be published. Required fields are marked *