ಕಾರ್​​ನಲ್ಲೇ ಬಂದು ಕಾರ್​​ ಕದ್ಕೊಂಡ್​​ ಹೋದ ಹೈಟೆಕ್​​ ಕಳ್ಳ

ಬೆಂಗಳೂರು: ಮನೆಗೆ ಕನ್ನ ಹಾಕೋದಕ್ಕೆ ಬರೋರು ಹೈಟೆಕ್ ಆಗಿ ದಶಕಗಳೇ ಕಳೆದು ಹೋಯ್ತು. ಆದ್ರೆ ಈಗ ಕಾರ್ ಕದಿಯೋದಕ್ಕೂ ಕಳ್ಳರು ಕಾರ್​ನಲ್ಲಿ ಬರೋಹಾಗೆ ಆಗಿದೆ. ಬಗಲಗುಂಟೆಯ ರಾಮಯ್ಯ ಲೇಔಟ್​​ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕದಿಯೋದಕ್ಕೆ ಕಾರ್​​ನಲ್ಲೇ ಬಂದು ಕದ್ದುಕೊಂಡು ಹೋಗಿದ್ದಾನೆ. ಸಂಧ್ಯಾ ಎಂಬುವವರ ಮನೆ ಮುಂದೆ ಸ್ಕಾರ್ಪಿಯೋ ಕಾರ್ ನಿಲ್ಲಿಸಿದ್ದರು. ಶನಿವಾರ ರಾತ್ರಿ ರಿಟ್ಜ್ ಕಾರ್​ನಲ್ಲಿ ಬಂದಿದ್ದ ಕಳ್ಳ ಕಾರ್ ನಿಂದ ಇಳಿದು ಸ್ಕಾರ್ಪಿಯೋ ಕಾರ್​ನ ಡೋರ್ ಓಪನ್ ಮಾಡಿದ್ದಾನೆ. ನಂತರ ಕಾರ್ ನಲ್ಲೇ ಕೂತು ವೈರ್ ಅನ್ನ ಕಟ್ ಮಾಡಿ ಬೀಪ್ ಸೌಂಡ್ ಬರದೇ ಇರೋ ಹಾಗೆ ಮಾಡಿದ್ದಾನೆ. ನಂತರ ಕಾರ್ ಅನ್ನು ಡೈರೆಕ್ಟ್ ಆಗಿ ಸ್ಟಾರ್ಟ್ ಮಾಡ್ಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಾರ್ ಕಳ್ಳತನ ಮಾಡ್ಕೊಂಡು ಹೋಗ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0

Leave a Reply

Your email address will not be published. Required fields are marked *