ತಾಲ್ಲೂಕ್​​​ ಬಂದ್​​ಗೆ ಕರೆ

ಕೊಡಗು: ಜಿಲ್ಲೆಯ ಕುಶಾಲನಗರದಲ್ಲಿ ನೂತನ ಕಾವೇರಿ ತಾಲ್ಲೂಕಿಗಾಗಿ ಒತ್ತಾಯಿಸಿ ಕಳೆದ 26 ದಿನಗಳಿಂದ ಅನಿರ್ಧಿಷ್ಟಾವಧಿ ಹೋರಾಟ ನಡೆಯುತ್ತಿದೆ. ಆದರೆ ಸರಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ನಾಳೆ ಬಂದ್​​ಗೆ ಕರೆ ನೀಡಲಾಗಿದೆ. ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬಂದ್​​​ಗೆ ತಾಲ್ಲೂಕು ಹೋರಾಟ ಸಮಿತಿ ಕರೆ ನೀಡಿದೆ. ಈ ಹಿಂದೆ 18 ದಿನಗಳ ನಿರಂತರ ಹೋರಾಟ ನಡೆಸಿದ ಬಳಿಕ ನಡುವೆ ಬಿಡುವು ನೀಡಲಾಗಿತ್ತು. ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನಲೆಯಲ್ಲಿ ಮತ್ತೆ ಆರಂಭವಾದ ಹೋರಾಟ 26 ನೇ ದಿನಕ್ಕೆ ಕಾಲಿಟ್ಟಿದೆ. ನಾಳೆ ಬಂದ್ ಆದ ನಂತರವೂ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಮರಣಾಂತ ಉಪವಾಸ ನಡೆಸುವ ಎಚ್ಚರಿಕೆಯನ್ನು ಹೋರಾಟ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ನೀಡಿದ್ದಾರೆ.

ಅನುಕಾರ್ಯಪ್ಪ, ಸುದ್ದಿ ಟಿವಿ, ಮಡಿಕೇರಿ.

0

Leave a Reply

Your email address will not be published. Required fields are marked *