ಉಪ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭ

ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ, ಇಂದು ಸಿದ್ದು ನ್ಯಾಮಗೌಡ ಪುತ್ರ ಆನಂದ ನ್ಯಾಮಗೌಡ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ನಡೆಸಲಿರುವ ಮೈತ್ರಿ​​ ಅಭ್ಯರ್ಥಿ, ಮೆರವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಿಸಿಎಂ ಡಾ.ಜಿ. ಪರಮೇಶ್ವರ್, ಬಾಗಲಕೋಟೆ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್, ಮಾಜಿ ಸಚಿವರುಗಳಾದ ಎಸ್.ಆರ್ ಪಾಟೀಲ್, ಎಂ.ಬಿ ಪಾಟೀಲ್ ಭಾಗಿ. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿರುವ ಆನಂದ ನ್ಯಾಮಗೌಡ, ನಂತರ ಕಡಪಟ್ಟಿ ಮೈದಾನದಲ್ಲಿ ಕೈ ಪಕ್ಷದ ಬೃಹತ್ ಸಮಾವೇಶ.

ಬಿಜೆಪಿ ಭದ್ರಕೋಟೆಯಲ್ಲಿ ಇಂದು ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದ ರಣಕಹಳೆ ಮೊಳಗಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಇಂದು ನಾಮಪತ್ರ ಸಲ್ಲಿಸಲಿದ್ಧಾರೆ. ಈ ವೇಳೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿಯವರು ಭಾಗಿಯಾಗಲಿದ್ದಾರೆ. 10.45 ಕ್ಕೆ ಶಿವಮೊಗ್ಗಕ್ಕೆ ಬರಲಿರುವ ಸಿಎಂ ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಕಾಂಗ್ರೆಸ್ ನ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ.

ಬಳ್ಳಾರಿ ಲೋಕಸಭಾ ಉಪಚುನಾವಣೆ ಹಿನ್ನೆಲೆ, ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ. ಕಾಂಗ್ರೆಸ್​​ನಿಂದ ವಿ.ಎಸ್.ಉಗ್ರಪ್ಪ, ಬಿಜೆಪಿಯಿಂದ ಜೆ. ಶಾಂತ ನಾಮಪತ್ರ ಸಲ್ಲಿಕೆ, ಇದಕ್ಕು ಮುನ್ನ ದುರ್ಗಮ್ಮ ದೇವಾಲಯದಿಂದ ಕಾಂಗ್ರೆಸ್ ಮೆರವಣಿಗೆ ಆರಂಭವಾಗಲಿದೆ. ಡಿಕೆಶಿ, ಬಿಜೆಪಿಯ ಶ್ರೀರಾಮುಲುಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಉಪಚುನಾವಣೆ, ಬಳ್ಳಾರಿಗೆ ಬಂದಿಳಿದ ಡಿ.ಕೆ.ಶಿವಕುಮಾರ್​ ಮತ್ತು ಬಿಜೆಪಿ ಶಾಸಕ ಸಿಟಿ.ರವಿ, ಬೆಳಗ್ಗೆ 10.30ಕ್ಕೆ ಬಿಜೆಪಿ ಕಚೇರಿಯಿಂದ ಆರಂಭವಾಗಲಿರುವ ಮೆರವಣಿಗೆ.

0

Leave a Reply

Your email address will not be published. Required fields are marked *