ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ: ನೀರಸ ಪ್ರತಿಕ್ರಿಯೆ

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ 08/02/2019ರಿಂದ 12/02/2019ರವರೆಗೆ 5 ದಿನಗಳ ಕಾಲ ಪುಸ್ತಕ ಮೇಳವನ್ನು ಆಯೋಜಿಸಿತ್ತು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ್ಯೆ ವಸುಂಧರಾ ಭೂಪತಿಯವರು ಈ ಮೇಳ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ತಾಲೀಮು ಕೊಠಡಿಗಳ ಮುಂಭಾಗದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ, ರಾಜ್ಯದ ಪ್ರತಿಷ್ಟಿತ 60 ಪ್ರಕಾಶನ ಸಂಸ್ಥೆಯವರಿಗೆ ಪುಸ್ತಕದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸುರಿದ ಅಕಾಲಿಕ ಮಳೆ ಮತ್ತು ಪ್ರಚಾರದ ಕೊರತೆಯ ಕಾರಣದಿಂದಾಗಿ ನಿರೀಕ್ಷಿತ ಪ್ರಮಾಣದಷ್ಟು ಪುಸ್ತಕ ಆಸಕ್ತರು ಪುಸ್ತಕ ಮೇಳಕ್ಕೆ ಬರಲಿಲ್ಲ ಎಂಬ ಅಭಿಪ್ರಾಯ ಪುಸ್ತಕ ಆಸಕ್ತರು ಮತ್ತು ಪ್ರಕಾಶಕರಿಂದ ವ್ಯಕ್ತವಾಗಿದೆ. ಈ ಕುರಿತ ಕೆಲವು ಅಭಿಪ್ರಾಯಗಳು ಇಲ್ಲಿವೆ.

ಆಕೃತಿ ಪ್ರಕಾಶನದ ಗುರುಪ್ರಸಾದ್ ಅವರ ಅಭಿಪ್ರಾಯ

ಸೃಷ್ಟಿ ಪ್ರಕಾಶನದ ನಾಗೇಶ್ ಅವರ ಅಭಿಪ್ರಾಯ

ಮಾಧವ್ ಐತಾಳ್ ಅವರ ಅಭಿಪ್ರಾಯ

ನಾ ಸೋಮೇಶ್ವರ ಅವರ ಅಭಿಪ್ರಾಯ

ಅವಿರತ ಹರೀಶ್ ಅವರ ಅಭಿಪ್ರಾಯ

ಸಪ್ನ, ಅಂಕಿತ, ನವಕರ್ನಾಟಕ, ಲಲಿತ ಕಲಾ ಅಕಾಡೆಮಿ, ಆಕೃತಿ, ಸಿರಿವರ, ಅಭಿನವ, ಸಾಹಿತ್ಯ ಅಕಾಡೆಮಿ ಸೇರಿದಂತೆ ರಾಜ್ಯದ ಪ್ರತಿಷ್ಟಿತ ಪ್ರಕಾಶಕರು ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ಡಾ. ರಾಜ್​ಕುಮಾರ್ ಅವರ ಜೀವನ ಕುರಿತ ರುಕ್ಕೋಜಿಯವರು ರಚಿಸಿರುವ ಬೃಹತ್ ಕೃತಿಯ ಮಾರಾಟಕ್ಕೆ ಕೂಡ ಮೇಳದಲ್ಲಿ ಪ್ರತ್ಯೇಕ ಮಳಿಗೆಯನ್ನು ತೆರೆಯಲಾಗಿತ್ತು. ಆದರೆ, ಬಹುತೇಕ ಮಳಿಗೆಗಳು ಸಾಹಿತ್ಯಾಸಕ್ತರು ಇಲ್ಲದೆ ಸೊರಗಿದ್ದು ಕಂಡುಬಂತು. ಮೇಳದಲ್ಲಿ ಭಾಗವಹಿಸಿದ್ದ ಕೆಲವು ಪ್ರಕಾಶಕರು, ಈ ಮೇಳ ಎಚ್ಚರಿಕೆಯ ಗಂಟೆ, ಮುಂದಿನ ದಿನಗಳಲ್ಲಿ ನಮಗೆ ಏನು ಮಾಡಬೇಕು ಎಂಬುದನ್ನು ಕಲಿಸಿದ ಮೇಳ ಎಂದು ಅಭಿಪ್ರಾಯಪಟ್ಟರು.

0

Leave a Reply

Your email address will not be published. Required fields are marked *