ಆನಂದ್ ತೇಲ್ತುಂಬ್ಡೆಗೆ ಬೋಧಿ ವೃಕ್ಷ ಪ್ರಶಸ್ತಿ

(Photo by Bhushan Koyande/Hindustan Times via Getty Images)

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕ, ಲೇಖಕ ಡಾ. ಆನಂದ್ ತೇಲ್ತುಂಬ್ಡೆಯವರು ಸ್ಫೂರ್ತಿಧಾಮ ಕೊಡಮಾಡುವ ‘ಬೋಧಿವೃಕ್ಷ’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂಬೇಡ್ಕರ್ ಜಯಂತಿಯಂದು ಪ್ರಶಸ್ತಿಯನ್ನು 14.4.2019ರ ಭಾನುವಾರ ಬೆಂಗಳೂರಿನ ‘ಸ್ಫೂರ್ತಿಧಾಮ’ದಲ್ಲಿ ಪ್ರದಾನ ಮಾಡಲಾಗುವುದು. ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಮಾನಸಿಕವಾಗಿ ಘಾಸಿಗೊಂಡಿರುವ ಅವರಿಗೆ ಸಾಂತ್ವನ ಹೇಳಿ ‘ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ’ ಎಂಬ ಸಂದೇಶ ಸಾರಲು ಜನಪರ ಆಶಯಗಳನ್ನು ಪ್ರತಿನಿಧಿಸುವ ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅವರನ್ನು ಭೇಟಿಮಾಡಲು ಉದ್ದೇಶಿಸಲಾಗಿದೆ. ಆದ್ದದರಿಂದ ಬಿಡುವುಮಾಡಿಕೊಂಡು ಬರಬೇಕೆಂದು ವಿನಂತಿ ಸ್ಫೂರ್ತಿ ಧಾಮ ಪ್ರಗತಿಪರರಲ್ಲಿ ಮನವಿ ಮಾಡಿಕೊಂಡಿದೆ.

ಸ್ಥಳ: ಸ್ಫೂರ್ತಿಧಾಮ, ಅಂಜನಾನಗರ, ಮಾಗಡಿ ರಸ್ತೆ, ಬೆಂಗಳೂರು.
ದಿನಾಂಕ: 14.04.2019
ಸಮಯ: ಮಧ್ಯಾಹ್ನ 4 ಗಂಟೆ

0

Leave a Reply

Your email address will not be published. Required fields are marked *