ಬಿಎಂಟಿಸಿ ಗೆ ಕೈ ಕೊಟ್ಟ ವೋಲ್ವೋ ಎಸಿ ಬಸ್…!

ನಷ್ಟದ ನಾಗಾಲೋಟದಲ್ಲಿ ಸಾಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವೋಲ್ವೊ ಬಸ್‌ಗಳು ಮತ್ತಷ್ಟು ನಷ್ಟದ ಭಾರ ಹೊರಿಸಲು ಮುಂದಾಗಿವೆ.. ಬಿಎಂಟಿಸಿ ಬಸ್ ದರದಕ್ಕಿಂತಲೂ ದುಪ್ಪಟ್ಟು ಟಿಕೆಟ್ ದರ ಹೆಚ್ಚಳವಿರೋ ನಮ್ಮ ಬಿಎಂಟಿಸಿ ವೋಲ್ವೋ ಬಸ್ ಗಳಲ್ಲಿ ಈಗ ಎಸಿ ವರ್ಕ್ ಹಾಗುತ್ತಿಲ್ಲ ಅನ್ನೋ ಬೇಸರ ಜನರಲ್ಲಿ ಮೂಡಿದೆ.ಇಡೀ ದೇಶವ್ಯಾಪ್ತಿ ಪ್ರಖ್ಯಾತಿಗಳಿಸಿರೋ ಬಿಎಂಟಿಸಿ ಸಾರಿಗೆ ಈಗ ನಷ್ಟದ ನಾಗಾಲೋಟದಲ್ಲಿ ತೇಲುತ್ತಿದೆ ಅಂದ್ರೆ ತಪ್ಪಾಗಲ್ಲ.. ಅದ್ರಲ್ಲೂ ಅಗ್ಗದ ಬೆಲೆಗೆ ಖರೀದಿಸಿರುವ ವೋಲ್ವೋ ಬಸ್ ಗಳಂತೂ ಈಗ ಜನರ ಕೆಂಗಣ್ಣಿಗೆ ಗುರಿಯಾಗಿವೆ.. ಬಿರುಬೇಸಿಗೆ ಅಂತಾ ಬಿಎಂಟಿಸಿ ವೋಲ್ವೋ ಎಸಿ ಬಸ್ ಅತ್ತಿ ಆರಾಮದಾಯಕ ಪ್ರಯಾಣ ಮಾಡೋಣ ಅಂತ ಬರೋ ಪ್ರಯಾಣಿಕರಿಗೆ ಬಸ್ ಗಳು ಬೇಸರ ಮೂಡಿಸುತ್ತಿವೆ. ಬಸ್ ಅತ್ತಿದ ಪ್ರಯಾಣಿಕರಿಗೆ ನೈಸರ್ಗಿಕ ಗಾಳಿಯೇ ಆಧಾರವಾಗಿದೆ.. ಬಸ್ ಪ್ರಯಾಣದ ವೇಳೆ ಯಾವುದೇ ಕಾರಣಕ್ಕೂ ಬಾಗಿಲುಗಳು ತೆರೆದಿರಬಾರದು ಎಂಬ ಬಿಎಂಟಿಸಿ ನಿಯಮವನ್ನ ಗಾಳಿಗೆತೂರಿದ್ದಾರೆ. ಎಸಿ ಯಾಕೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಪ್ರಯಾಣಿಕರ ಪ್ರಶ್ನೆಗೆ ಚಾಲಕ ಹಾಗು ನಿರ್ವಾಹಕರು ತಬ್ಬಿಬ್ಬಾದ ಉತ್ತರ ನೀಡುತ್ತಿದ್ದಾರೆ.

ಇನ್ನು ಬಿಎಂಟಿಸಿ ಸಾಮಾನ್ಯ ಬಸ್ ನ ದರಕ್ಕೆ ಹಾಗು ವಾಯುವಜ್ರ ಬಸ್ ಟಿಕೆಟ್ ದರಕ್ಕೆ ಹೋಲಿಕೆ ಮಾಡಿದ್ರೆ ಸಿಕ್ಕಾಪಟ್ಟೆ ದುಪ್ಪಟ್ಟು ದರ ನಿಗದಿ ಮಾಡಲಾಗಿದೆ. ಸಧ್ಯ ಈಗ ಕೆಲವೊಂದು ವೋಲ್ವೋ ವಾಯುವಜ್ರ ಬಸ್ ಗಳಲ್ಲಿ ಎಸಿ ಕೈ ಕೊಟ್ಟಿದ್ದು, ರೂಟ್ ಗೆ ಬಿಡಲಾಗಿದೆ. ಎಸಿ ಕೆಲಸ ಮಾಡದೇ ಇದ್ರೆ ಡೋರ್ ಗಳನ್ನ ತೆಗೆದುಕೊಂಡು ಬಸ್ ಚಾಲನೆ ಮಾಡ್ತಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಜೊತೆಗೆ ಟಿಕೆಟ್ ದರದಲ್ಲಿ ಮಾತ್ರ ಯಾವುದೇ ಪ್ರಮಾಣದಲ್ಲಿ ಕಡಿಮೆ ಮಾಡಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.. ಅಲ್ಲದೇ ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.ಕೋಟಿ ಕೋಟಿ ಸುರಿದು ತನ್ನ ಖಿಸೆಗೆ ಖುಲಾವಿ ಹೊಲೆಸಿಕೊಳ್ತಿರೋ ಬಿಎಂಟಿಸಿ ನಿಗಮ ಹವಾನಿಯಂತ್ರ ಬಸ್ ಗಳತ್ತ ಗಮನಹರಿಸಬೇಕಿದೆ. ದಿನ ಕಳೆದಂತೆ ಎಸಿ ಬಸ್ ಗಳತ್ತ ಮುಖ ಮಾಡುತ್ತಿರೋ ಪ್ರಯಾಣಿಕರನ್ನ ತನ್ನಲ್ಲೆ ಉಳಿಸಿಕೊಳ್ಳುವ ಪ್ರಯತ್ನಕೂಡ ಬೇಕಿದೆ.

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು.

0

Leave a Reply

Your email address will not be published. Required fields are marked *