ಷೇರು ಮಾರುಕಟ್ಟೆಯಲ್ಲಿ ಮಾರಣಹೋಮ: 5 ನಿಮಿಷದಲ್ಲಿ 4 ಲಕ್ಷ ಕೋಟಿ ಭಸ್ಮ

ಷೇರು ಮಾರುಕಟ್ಟೆಯಲ್ಲಿ ಮಾರಣ ಹೋಮ
ಐದೇ ನಿಮಿಷದಲ್ಲಿ 4 ಲಕ್ಷ ಕೋಟಿ ನಷ್ಟ
ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ
906 ಅಂಶ ಕುಸಿದ ಸೆನ್ಸೆಕ್ಸ್
306 ಅಂಶ ಕಳೆದುಕೊಂಡ ನಿಫ್ಟಿ

ಮುಂಬೈ: ಷೇರು ಮಾರುಕಟ್ಟೆ ಆರಂಭವಾದ ಐದೇ ನಿಮಿಷದಲ್ಲೇ ಮಾರಣಹೋಮ ನಡೆದಿದ್ದು, ಬರೋಬ್ಬರಿ 4 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾದ ಕುಸಿತದ ಪರಿಣಾಮದಿಂದಾಗಿ ದೇಶೀ ಈಕ್ವಿಟಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಭಾರೀ ನಷ್ಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 906 ಅಂಶ ಕುಸಿದರೆ, ನಿಫ್ಟಿ 306 ಅಂಶ ಕಳೆದುಕೊಂಡಿತು. ಇನ್ನು ಡಾಲರ್ ಎದುರು ರೂಪಾಯಿ ದರ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್ ಬೆಲೆ 74.42 ರೂಪಾಯಿ ಆಗಿದೆ. ಈ ಮೂಲಕ ದೇಶೀ ಉದ್ಯಮಿಗಳು, ವಿದೇಶದಿಂದ ಕಚ್ಚಾವಸ್ತು, ಯಂತ್ರೋಪಕರಣಗಳನ್ನು ಆಮದು ಆಧಾರಿತ ಉದ್ಯಮಗಳಿಗೆ ಭಾರೀ ಆರ್ಥಿಕ ಹೊರೆ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಡಾಲರ್​​ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಷೇರು ಮಾರುಕಟ್ಟೆ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಡಾಲರ್ ಎದುರು ರೂಪಾಯಿ ದರ 18 ಪೈಸೆ ಕುಸಿಯಿತು. ಈ ಮೂಲಕ ಪ್ರತಿ ಡಾಲರ್ ಬೆಲೆ 74.45 ರೂಪಾಯಿಗೆ ಏರಿಕೆ ಕಂಡಿತು. ಆಮದುದಾರರಿಂದ ಅಮೆರಿಕನ್ ಡಾಲರ್​ಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ನಿರಂತರವಾಗಿ ಏರಿಕೆಯಾಗಿದ್ದು, ರೂಪಾಯಿ ದರ ಕುಸಿದಿದೆ.

ಷೇರು ಮಾರುಕಟ್ಟೆಯ ವಹಿವಾಟಿನ ಆರಂಭದಲ್ಲೇ ದೇಶೀ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ತೀವ್ರ ಕುಸಿತ ಕಂಡುಬಂತು. ಶೇ.5ರಷ್ಟು ಮೌಲ್ಯವನ್ನು ದೇಶೀ ಮಾರುಕಟ್ಟೆ ಕಳೆದುಕೊಂಡಿದೆ ಎಂದು ಆರ್ಥಿಕ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಪ್ರಮಾಣದ ಕುಸಿತ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಹೂಡಿಕೆದಾರರು ನಡುಗುತ್ತಿದ್ದಾರೆ. ನಾನು ಹಣಕಾಸು ಸಚಿವರಿಂದ ಮಹತ್ವದ ಹೆಜ್ಜೆಯನ್ನು ನಿರೀಕ್ಷಿಸುತ್ತೇನೆ ಎಂದು ಅವರು ಅರುಣ್ ಜೇಟ್ಲಿಯವರ ಕಾಲೆಳೆದಿದ್ದಾರೆ. 900 ಪದಗಳ ಲೇಖನವನ್ನು ಬ್ಲಾಗ್​ನಲ್ಲಿ ಅರುಣ್ ಜೇಟ್ಲಿಯವರು ಬರೆಯಬಹುದು ಎಂದು ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಷೇರು ಮಾರುಕಟ್ಟೆ ಸೂಚ್ಯಂಕ

ಸೆನ್ಸೆಕ್ಸ್‌: 34,001: -759.74
ನಿಫ್ಟಿ 50: 10,234: – 225.45
ಚಿನ್ನ: 31,616: + 235.00
ಡಾಲರ್ – ರೂ. ದರ: 74.14: – 0.08

ಇನ್ನು ಡಾಲರ್ ಎದುರು ರೂಪಾಯಿ ದರ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್ ಬೆಲೆ 74.42 ರೂಪಾಯಿ ಆಗಿತ್ತು. ಷೇರು ಮಾರುಕಟ್ಟೆ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಡಾಲರ್ ಎದುರು ರೂಪಾಯಿ ದರ 18 ಪೈಸೆ ಕುಸಿಯಿತು. ಈ ಮೂಲಕ ಪ್ರತಿ ಡಾಲರ್ ಬೆಲೆ 74.45 ರೂಪಾಯಿಗೆ ಏರಿಕೆ ಕಂಡಿತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *