ಕೃಷ್ಣ ಮೃಗ ಬೇಟೆ ಪ್ರಕರಣ: ಸೋನಾಲಿ, ನೀಲಂ, ಟಬು, ಸೈಫ್​ಗೆ ಮತ್ತೆ ಸಂಕಷ್ಟ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟರ ಖುಲಾಸೆ ವಿಚಾರ
ಸೋನಾಲಿ ಬೇಂದ್ರ, ಟಬು, ಸೈಫ್, ನೀಲಂಗೆ ಸಂಕಷ್ಟ
ರಾಜಸ್ಥಾನ ಸರ್ಕಾರದಿಂದ ಮೇಲ್ಮನವಿಗೆ ನಿರ್ಧಾರ

ಜೈಪುರ: ಬಾಲಿವುಡ್ ನಟ-ನಟಿಯರಾದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ಟಬು, ಸೈಫ್ ಅಲಿ ಖಾನ್ ಮತ್ತು ಇತರರನ್ನು ಕೃಷ್ಣಮೃಗ ಬೇಟೆ ಆರೋಪದಿಂದ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ, ರಾಜಸ್ಥಾನ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ರಾಜಸ್ಥಾನ ಸರ್ಕಾರ ಹೇಳಿದೆ. ಕಳೆದ 4 ವರ್ಷಗಳ ಹಿಂದೆ ಇವರನ್ನು ಕೋರ್ಟ್ ಖುಲಾಸೆಗೊಳಿಸಲಾಗಿತ್ತು.

ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿಯೆಂದು ಸಾಬೀತಾಗಿದ್ದು, 5 ವರ್ಷ ಸೆರೆವಾಸ ವಿಧಿಸಲಾಗಿದೆ. ಜೋಧ್​ಪುರದಲ್ಲಿ 1998ರಲ್ಲಿ ಹಂ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣ ವೇಳೆ 2 ಕೃಷ್ಣ ಮೃಗಗಳನ್ನು ಕೊಂದ ಆರೋಪ ಈ ನಟರ ಮೇಲೆ ಎದುರಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ಟಬು, ಸೈಫ್ ಅಲಿ ಖಾನ್ ಮತ್ತು ಇತರರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. ಕಳೆದ ಆಗಸ್ಟ್​​ನಲ್ಲಿ ಜೋಧ್​ಪುರ ಸೆಷನ್ಸ್ ಕೋರ್ಟ್ ಸಲ್ಮಾನ್ ಖಾನ್ ವಿದೇಶ ಪ್ರವಾಸ ತೆರಳಬೇಕಾದ ಸಂದರ್ಭದಲ್ಲಿ ಕೋರ್ಟ್​​ನಿಂದ ಅನುಮತಿ ಪಡೆದು ತೆರಳಬೇಕು ಎಂದು ಸೂಚಿಸಿತ್ತು.

0

Leave a Reply

Your email address will not be published. Required fields are marked *