ಸಂಸ್ಕಾರ ಇರುವವರಿಗೆ ಜನ್ಮ ನೀಡಿ, ಇಲ್ಲವಾದರೆ ಬಂಜೆಯಾಗಿರಿ: ಬಿಜೆಪಿ ಶಾಸಕ ಗುಣ

ಭೋಪಾಲ್: ಕಾಂಗ್ರೆಸ್ ಗರೀಬಿ ಹಠಾವೋ ಹೇಳಿಕೆಯೊಂದಿಗೆ ಬೆಳೆದಿತ್ತು, ಆದರೆ, ಬಡವರನ್ನೇ ಅಳಿಸಿ ಹಾಕಿತು ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಗುಣ ಹೇಳಿದ್ದಾರೆ. ಇದಲ್ಲದೇ, ಮಾತನಾಡುವ ವೇಳೆ ತಮ್ಮ ನಾಲಿಗೆಯ ಮೇಲೆ ನಿಯಂತ್ರಣ ಕಳೆದುಕೊಂಡ ಅವರು, ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನು ಟೀಕಿಸುವ ಭರದಲ್ಲಿ, ಸಂಸ್ಕಾರ ಇಲ್ಲದವರು ಮತ್ತು ಸಮಾಜವನ್ನು ಹಾಳುಮಾಡುವ ಇಂಥ ಮಕ್ಕಳನ್ನು ಹೆರುವುದಕ್ಕಿಂಥ ಹೆಣ್ಣು ಬಂಜೆಯಾಗಿ ಉಳಿಯಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಬಿಜೆಪಿ ನಾಯಕರು ನೀಡುವ ವಿವಾದಾತ್ಮಕ ಹೇಳಿಕೆಯ ಸರಣಿ ಮುಂದುವರೆದಿದೆ. ಹೆಣ್ಣು ಮಕ್ಕಳು ಸುರಕ್ಷಿತವಾಗಿರಬೇಕು ಎಂದಾದಲ್ಲಿ ಬಾಯ್​ ಫ್ರೆಂಡ್​​​ಗಳಿಂದ ದೂರ ಇರಬೇಕು, ಇಟಲಿಯಲ್ಲಿ ಮದುವೆಯಾದ ವಿರಾಟ್ ಕೊಹ್ಲಿಯವರ ದೇಶಭಕ್ತಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕ ಪನ್ನಾಲಾಲ್ ಶಾಕ್ಯ ನಂತರ ವಿವಾದಾತ್ಮಕ ಹೇಳಿಕೆಯನ್ನು ಗುಣ ಕೊಟ್ಟಿದ್ದಾರೆ.

0

Leave a Reply

Your email address will not be published. Required fields are marked *