ರಾಮ ಮಂದಿರಕ್ಕೆ ಅಡ್ಡಿಪಡಿಸಿದರೆ ಹಜ್​ಗೆ ತಡೆ: ಬಿಜೆಪಿ ಶಾಸಕ

ಲಖ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟದೇ ಇದ್ದಲ್ಲಿ ಮೆಕ್ಕಾಗೆ ಹಜ್ ಯಾತ್ರೆಗೆ ಹೋಗುವ ಮುಸ್ಲೀಮರನ್ನು ತಡೆಯುವುದಾಗಿ ಉತ್ತರಪ್ರದೇಶದ ಬಿಜೆಪಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಎಂ ಆದಿತ್ಯನಾಥ್ ಅವರ ಎಚ್ಚರಿಕೆಯನ್ನು ಉಲ್ಲಂಘಿಸಿದ್ದಾರೆ. ಕೆಲವು ದಿನಗಳ ಹಿಂದೆ ಆದಿತ್ಯನಾಥ್ ಅವರು ಪಕ್ಷದ ಯಾವುದೇ ನಾಯಕರು ವಿವಾದಾಸ್ಪದ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದ್ದರು. ಆದರೆ, ಅವರ ಮಾತಿಗೆ ಕೂಡ ಭೂಷಣ್ ಬೆಲೆ ನೀಡಿಲ್ಲ.

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಅಡ್ಡಿಪಡಿಸಿದಲ್ಲಿ, ಅವರನ್ನು ಮೆಕ್ಕಾ ಮದೀನಾಗಳಿಗೆ ಹೋಗದಂತೆ ಶಾಸಕ ಗುಡ್ಡು ರಜಪೂತ್ ತಡೆಯುತ್ತಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡಿದ್ದಾರೆ. ಇದರೊಂದಿಗೆ ಪ್ರಚೋದನಕಾರಿ ಬರಹವನ್ನು ಹಂಚಿಕೊಂಡಿರುವ ಅವರು, ಅಮರನಾಥ್ ಯಾತ್ರಿಕರನ್ನು ಹತ್ಯೆಗೈಯುವ ಮೂಲಕ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಯತ್ನಿಸಲಾಗುತ್ತಿದೆ. ನಮ್ಮ ಸರ್ಕಾರ ಅಂಥ ಜನ ಮತ್ತು ದೇಶಕ್ಕೆ ತಕ್ಕ ಉತ್ತರ ಕೊಡಬೇಕು. ಹಾಗೆ ಮಾಡಿದಲ್ಲಿ ಹಿಂದೂ ಧರ್ಮದ ಕಡೆಗೆ ಯಾರೂ ಬೆರಳು ತೋರುವ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *