ಬಿಜೆಪಿಯವ್ರು ರಾಜಕೀಯಕ್ಕಾಗಿ ಹಿಂದುತ್ವ ಮಾಡ್ತಿದ್ದಾರೆ

ಬಿಜೆಪಿಯವ್ರು ರಾಜಕೀಯಕ್ಕಾಗಿ ಹಿಂದುತ್ವ ಮಾಡ್ತಿದ್ದಾರೆ ಅಂತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವ್ರು ಹಿಂದೂ ಸಂಘಟನೆ ಮೂಲಕ ಬಂದ ಅನಂತಕುಮಾರ್ ಸಂಘಟನೆಗಳನ್ನ ಮುಳುಗಿಸಿದ್ದಾರೆ..ಹೀಗಾಗಿ ಅನಂತ್​ ಕುಮಾರ್​ ನೂರಕ್ಕೆ ನೂರು ನಕಲಿ ಹಿಂದುವಾದಿ ಅಂದ್ರು. ಇನ್ನು ಚುನಾವಣಾ ಕಣಕ್ಕಿಳಿದಿರುವ ಬಗ್ಗೆ ಮಾತನಾಡಿದ ಮುತಾಲಿಕ್​, ನಾವು ಶಿವಸೇನೆ ಜೊತೆಗೆ ಹಿಂದೂ ಕೇಸರಿ ಪಡೆ ಎನ್ನುವ ಸಂಯುಕ್ತ ಪಡೆಯೊಂದಿಗೆ ರಾಜ್ಯದ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಿದ್ದು, ಹಿಂದುತ್ವಕ್ಕಾಗಿ ರಾಜಕೀಯ ಮಾಡ್ತೇವೆ. ಆದ್ರೆ ಇದ್ರಲ್ಲಿ ಬಿಜೆಪಿಯವ್ರು ನಾಟಕವಾಡ್ತಿದ್ದು, ರಾಜಕೀಯಕ್ಕಾಗಿ ಹಿಂದುತ್ವ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆಂದು ಮುತಾಲಿಕ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು….

0

Leave a Reply

Your email address will not be published. Required fields are marked *