ವಾಹನ ಸವಾರರಿಗೆ ಬಿಗ್​ ಶಾಕ್​

ಇಂದಿನಿಂದ ವಾಹನ ಸವಾರರಿಗೆ ಬಿಗ್​ ಶಾಕ್​.. ಡಿಎಲ್​, ಎಲ್​ಎಲ್​ ಆರ್ ಹಾಗೂ ವಾಹನ ನೋಂದಣೆ ಶುಲ್ಕವನ್ನ ಏಕಾಏಕಿ ಹೈಕ್​ ಮಾಡಲಾಗಿದೆ. ಈ ರೀತಿ ಆರ್​ಟಿಓ ವಾಹನ ಸವಾರರಿಗೆ ಶಾಕ್​ ನೀಡಿದೆ. ಡಿಲ್​ ಹಾಗೂ ಎಲ್​ಎಲ್​ ಆರ್​ ಶುಲ್ಕ ಆರು ಪಟ್ಟು ಜಾಸ್ತಿ ಆಗಿದೆ. ರಾಜ್ಯದಲ್ಲಿ ಇಂದಿನಿಂದಲೇ ನೂತನ ದರ ಜಾರಿ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರು ವಾಹನ ನಿಯಮ 1989ಕ್ಕೆ ತಿದ್ದುಪಡಿ ತಂದು ಶುಲ್ಕ ಹೆಚ್ಚಿಸಲಾಗಿದೆ. ಡಿಎಲ್​ ಶುಲ್ಕ 35 ರಿಂದ 200 ರೂಪಾಯಿ ಎಲ್​ ಎಲ್​ ಆರ್​ ಶುಲ್ಕ 50 ರಿಂದ 150 ರೂಪಾಯಿಗೆ ಹೆಚ್ಚಳವಾಗಿದೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಡಿಸೆಂಬರ್​ 29 ರಿಂದ ಅನ್ವಯವಾಗುವಂತೆ ಪರಿಷ್ಕರಣ ಮಾಡಿತ್ತು. ರಾಜ್ಯದ ಎಲ್ಲಾ ಸಾರಿಗೆ ವಿಭಾಗಗಳಲ್ಲಿ ಆರ್​ಟಿಓ ಶುಲ್ಕ ಹೆಚ್ಚಿಸಿದೆ.

0

Leave a Reply

Your email address will not be published. Required fields are marked *