ನಲಪಾಡ್‌ಗೆ ಬಿಗ್ ರಿಲೀಫ್, ಮಧ್ಯಾಹ್ನದ ನಂತರ ನಲಪಾಡ್ ಬಿಡುಗಡೆ

ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್‌ ಹಲ್ಲೆ ಪ್ರಕರಣ. ಮೊಹಮ್ಮದ್ ನಲಪಾಡ್‌ಗೆ ಷರತ್ತು ಬದ್ಧ ಜಾಮೀನು. ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಹೈಕೋರ್ಟ್.ತೀರ್ಪು ಪ್ರಕಟಿಸಿದ ನ್ಯಾ. ಜಾನ್ ಮೈಕಲ್ ಖನ್ನಾ. 2 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಆಧಾರದ ಮೇಲೆ ಜಾಮೀನು.  ಸಾಕ್ಷ್ಯನಾಶ ಮಾಡದಂತೆ ಹೈಕೋರ್ಟ್ ಸೂಚನೆ. ಪಾಸ್‌ಪೋರ್ಟ್‌ನ್ನು ಕೋರ್ಟ್ ವಶಕ್ಕೆ ನೀಡುವಂತೆ ಸೂಚನೆ.  ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳದಂತೆ ತಾಕಿತು. ಅಂತು ನಲಪಾಡ್ 116 ದಿನಗಳ ಸೆರೆವಾಸಕ್ಕೆ ಸಿಕ್ತು ಮುಕ್ತಿ..!.

ಮೂರು ಗಂಟೆ ಸುಮಾರಿಗೆ ಅಗ್ರಹಾರ ಸೇರಲಿರುವ ಹೈ ಕೋರ್ಟ್ ಆದೇಶ ಪ್ರತಿ. 3:30 ಸುಮಾರಿಗೆ ಜೈಲಿನಿಂದ ಹೊರ ಬರಲಿರುವ ನಲಪಾಡ್. 116 ದಿನಗಳ ಸೆರೆಮನೆವಾಸ ಮುಗಿಸಿ ಹೊರ ಬರಲಿರುವ ಮೊಹಮ್ಮದ್ ನಲಪಾಡ್. ರಂಝಾನ್ ಹಬ್ಬಕ್ಕೆ ಎರಡು ‌ದಿನ ಬಾಕಿ ಇರುವಂತೆ ನಲಪಾಡ್ ಗೆ ಬಿಡುಗಡೆ ಭಾಗ್ಯ.

0

Leave a Reply

Your email address will not be published. Required fields are marked *