ಲಲಿತ್ ಮೋದಿಗೆ ಬಿಗ್ ರಿಲೀಫ್

ನವದೆಹಲಿ: ಐಪಿಎಲ್​​ನಲ್ಲಿ ಅಕ್ರಮ ಎಸಗಿದ್ದ ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿಯವರಿಗೆ ಮತ್ತೆ ರಿಲೀಫ್​ ಸಿಕ್ಕಿದೆ. ಲಲಿತ್​ ಮೋದಿಗೆ ರೆಡ್ ಕಾರ್ನರ್ ನೊಟೀಸ್ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟನ್​ ತಿರಸ್ಕರಿಸಿದೆ. ಐಪಿಎಲ್​​ನಲ್ಲಿ ಅಕ್ರಮ ಎಸಗಿದ್ದ ಲಲಿತ್​ ಮೋದಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರ ವಿರುದ್ಧ ರೆಡ್​ ಕಾರ್ನರ್​ ನೊಟೀಸ್​ ನೀಡುವಂತೆ ಭಾರತ ಬ್ರಿಟನ್​ಗೆ ಮನವಿ ಮಾಡಿಕೊಂಡಿತ್ತು. ಇದು ಪ್ರಧಾನಿ ಮೋದಿ ಸರ್ಕಾರದ ಮತ್ತೊಂದು ವೈಫಲ್ಯ ಅಂತ ಕಾಂಗ್ರೆಸ್​ ಟೀಕಿಸಿದೆ. ಬಡ್ಡಿ ಸೇರಿ 9000 ಕೋಟಿ ರೂ.ಗಳನ್ನು ಬ್ಯಾಂಕ್​ಗಳಿಗೆ ಪಾವತಿಸದೇ, ಪಂಗನಾಮ ಹಾಕಿ ಬ್ರಿಟನ್​ನಲ್ಲಿ ಅವಿತುಕೊಂಡಿರುವ ವಿಜಯ್​ ಮಲ್ಯರನ್ನು ಕೂಡ ಕೇಂದ್ರ ಸರ್ಕಾರ ಭಾರತಕ್ಕೆ ಕರೆತರುವಲ್ಲಿ ವಿಫಲವಾಗಿತ್ತು.

0

Leave a Reply

Your email address will not be published. Required fields are marked *