ಹಿಂಸಾಚಾರಕ್ಕೆ ತಿರುಗಿದ ಬೀದರ್​​ ಬಂದ್​​

ಬೀದರ್​: ಜಿಲ್ಲೆಯ ಪೂಜಾ ಹಡಪದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಎಬಿವಿಪಿ, ಎಸ್ಎ​ಫ್​ಐ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್​ ಹಿಂಸಾಚಾರಕ್ಕೆ ತಿರುಗಿದೆ. ಅಂಬೇಡ್ಕರ್ ವೃತದಲ್ಲಿ ಜಾಮಾಯಿಸಿದ ಸಾವಿರಾರು ಹಿಂದೂ ಪರ ಸಂಘಟನಾಕಾರರು ಜೌಬಾರಾ ಮಾರ್ಕೆಟ್ ಕಡೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದರು. ಪ್ರತಿಭಟನೆಯಲ್ಲಿ ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

0

Leave a Reply

Your email address will not be published. Required fields are marked *